ಹಾವು ಕಡಿತ ಊದಿಕೊಂಡ ಮಹಿಳೆಯ ಮುಖ

ಡಾ.ಯಳಮಲಿ ಕಾರು ಪಾದಚಾರಿಗೆ ಡಿಕ್ಕಿ
ಹುಬ್ಬಳ್ಳಿ: ಜನತಾ ಬಜಾರದಿಂದ ನೀಲಿಜಿನ್ ರಸ್ತೆಯತ್ತ ಹೊರಟಿದ್ದ ಪಾದಚಾರಿಗೆ ವೈದ್ಯರೋರ್ವರು ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ನಡೆದಿದೆ.
ಡಾ.ಯಳಮಲಿಯವರ ಕಾರು ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಹೋಗುತ್ತಿದ್ದ ಸಮಯದಲ್ಲಿ, ನಡೆದುಕೊಂಡು ಹೋಗುತ್ತಿದ್ದ ಮಹಾಂತೇಶ ಜಿತೂರಿ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ತೀವ್ರ ಥರದ ಗಾಯಗಳಾಗಿವೆ. ತಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಡಾ.ಯಳಮಲಿಯವರ ಕಾರನ್ನ ವಶಕ್ಕೆ ಪಡೆದು, ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಹಿರೇಕೆರೂರಲ್ಲಿ ತಲಗೆ ಹಾವು ಕಡಿತ: ಊದಿಕೊಂಡ ಮಹಿಳೆಯ ಮುಖ
ಹಾವೇರಿ: ಮಲಗುವ ಸಮಯದಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಮಹಿಳೆಯೊಬ್ಬರ ತಲೆಗೆ ಹಾವು ಕಡಿದ ಘಟನೆ ನಡೆದಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನ ಮಲ್ಲಮ್ಮ ಎಂಬ ಮಹಿಳೆಯ ತಲೆಗೆ ಹಾವು ಕಡಿದಿದ್ದು, ಮಹಿಳೆಗೆ ವಿಷವೇರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾವು ಕಡಿದ ಪರಿಣಾಮ ಮಹಿಳೆಯ ಮುಖ ಸಂಪೂರ್ಣವಾಗಿ ಊದಿಕೊಂಡಿದ್ದು, ಚಿಕಿತ್ಸೆಯನ್ನ ಮುಂದುವರೆಸಲಾಗಿದೆ. ಹಾವು ಕಡಿದ ಸಮಯ ನಿಖರವಾಗಿ ಗೊತ್ತಾಗದ ಹಿನ್ನೆಲೆಯಲ್ಲಿ ವಿಷ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.