ಶಿಗ್ಲಿ ಬಸ್ಯಾ ಈಗ ಗ್ರಾಮ ಪಂಚಾಯತಿ ಮೆಂಬರ್ ಗಂಡ
1 min readಗದಗ: ರಾಜ್ಯದ ಹಲವು ಕಡೆ 200ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ಅವುಗಳಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು, ಅವುಗಳಿಗೆ ವಕೀಲರನ್ನಿಡದೇ ತಾನೇ ನಿಬಾಯಿಸಿ ಗೆಲ್ಲುತ್ತಿದ್ದ ಶಿಗ್ಲಿ ಬಸ್ಯಾ ಅಲಿಯಾಸ್ ಬಸವರಾಜ ಗಡ್ಡಿ ಇಂದಿನಿಂದ ಗ್ರಾಮ ಪಂಚಾಯತಿ ಮೆಂಬರ್ ಗಂಡನಾಗುತ್ತಿದ್ದಾನೆ.
ತನ್ನ ಬೇಡಿಕೆಗಾಗಿ ಕಂಡ ಕಂಡಲ್ಲಿ ಟವರ್ ಗಳನ್ನ ಏರುತ್ತಿದ್ದವನ ಮಡದಿ ಗುಲ್ಜಾರಭಾನು ಶಿಗ್ಲಿ, ಲಕ್ಷ್ಮೀಶ್ವರ ಪಟ್ಟಣದ ಸಮೀಪದ ಶಿಗ್ಲಿ ಗ್ರಾಮ ವಾರ್ಡ್ ನಂಬರ 1ರಿಂದ ಕಣಕ್ಕೆ ಇಳಿದಿದ್ದರು. ಇದೀಗ ಶಿಗ್ಲಿ ಬಸುನ ಮಡದಿ 2 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಬ್ಬಿನ ರೈತನ ಚಿತ್ರದಡಿ ಚುನಾವಣೆ ಎದುರಿಸಿದ್ದ ಗುಲ್ಜಾರಭಾನು ಎದುರಿಗೆ ಮೂವರು ಮಹಿಳೆಯರು ಸ್ಪರ್ಧೆಯೊಡ್ಡಿದ್ದರು. ತೀವ್ರ ತುರುಸಾಗಿ ನಡೆದ ಚುನಾವಣೆಯಲ್ಲಿ ಕೊನೆಗೂ ಶಿಗ್ಲಿ ಬಸುನ ಮಡದಿ ಮೆಂಬರ್ ಆಗಿದ್ದಾಳೆ. ಇದರಿಂದ ಶಿಗ್ಲಿ ಬಸು, ಬಹಳಷ್ಟು ಖುಷಿಯಾಗಿದ್ದು, ತನ್ನ ಬೇಡಿಕೆಗಾಗಿ ಟವರ್ ಏರುತ್ತಿದ್ದವ ಮುಂದೇನು ಮಾಡುತ್ತಾನೆ ಎಂಬುದನ್ನ ಕಾದು ನೋಡಬೇಕಿದೆ.