ಸಿದ್ಧು ಸವದಿ ನೂಕಿದ್ದ ಪುರಸಭೆ ಸದಸ್ಯೆಯ ಗರ್ಭಪಾತ- ರಾಜಕಾರಣಕ್ಕೆ ಹೊಟ್ಟೆಯಲ್ಲೇ ಮಗು ಮರಣ..!
1 min readಬಾಗಲಕೋಟೆ: ರಾಜ್ಯಾಧ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಮಹಾಲಿಂಗಪುರದ ಪುರಸಭೆ ಚುನಾವಣೆಯ ನೂಕಾಟ-ತಳ್ಳಾಟ ಪ್ರಕರಣದಲ್ಲಿ ಗಾಯಗೊಂಡಿದ್ದ ಪುರಸಭೆ ಸದಸ್ಯೆಗೆ ಇದೀಗ ಗರ್ಭಪಾತವಾಗಿದ್ದು, ರಾಜಕಾರಣದಿಂದ ಜಗತ್ತು ಕಾಣುವ ಮುನ್ನವೇ ಮಗುವೊಂದು ಸಾವಿಗೀಡಾದಂತಾಗಿದೆ.
ಭಾರತೀಯ ಜನತಾ ಪಕ್ಷದ ಶಾಸಕ ಸಿದ್ದು ಸವದಿ, ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ತಳ್ಳಿದ್ದರು. ಈ ವೇಳೆ ಚಾಂದಿನಿ ಆಯತಪ್ಪಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.
ಪುರಸಭೆ ಚುನಾವಣೆ ವೇಳೆ ಚಾಂದಿನಿ ನಾಯಕ್ ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಚಾಂದಿನಿ ನಾಯಕ್ ಪುರಸಭೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಆದರೂ, ಚಾಂದಿನಿ ಅವರು ಪುರಸಭೆ ಪ್ರವೇಶಕ್ಕೆ ಮುಂದಾದಾಗ ಸಿದ್ದು ಸವದಿ ಸೇರಿದಂತೆ ಹಲವರು ಎಳೆದಾಡಿದ್ದರು. ನೂಕಾಟ ತಳ್ಳಾಟ ನಡೆದು ಚಾಂದಿನಿ ನಾಯಕ್ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು.
ಚಾಂದಿನಿ ನಾಯಕ್ ಗೆ ಹೊಟ್ಟೆ ಭಾಗದಲ್ಲಿ ಪೆಟ್ಟಾಗಿತ್ತು ಎನ್ನಲಾಗಿತ್ತು. ಇದೀಗ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತವಾಗಿದೆ ಎಂದು ತಿಳಿದುಬಂದಿದೆ. ಪುರಸಭೆ ಪಟ್ಟಕ್ಕಾಗಿ ಇನ್ನೂ ಪ್ರಪಂಚವನ್ನೇ ನೋಡದ ಹಸುಗೂಸು ಹೊಟ್ಟೆಯಲ್ಲೇ ಬಲಿಯಾಗಿರುವುದು ದುರ್ದೈವದ ಸಂಗತಿಯಾಗಿದೆ.