ಸಿದ್ಧರಾಮಯ್ಯನವರದ್ದು ಎಲುಬಿಲ್ಲದ ನಾಲಿಗೆ: ಆರೋಗ್ಯ ಸಚಿವರ ವ್ಯಂಗ್ಯ

ಚಿತ್ರದುರ್ಗ: ಸಿಎಂ ಯಡಿಯೂರಪ್ಪನವರಿಗೆ ಧಮ್ ಇಲ್ಲ ಅನ್ನುವ ಸಿದ್ದರಾಮಯ್ಯ ಹೇಳಿಕೆಗೆ ರಾಮುಲು ತಿರುಗೇಟು ನೀಡಿದ್ದು, ಧಮ್ ಇದೇಯಾ, ಇಲ್ಲ ಅನ್ನುವ ಪ್ರಶ್ನೆ ಉದ್ಭವ ಆಗಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಡಿಯಲ್ಲಿ ಹೇಳಿದರು.
ಕೊವೀಡ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೋನಾ ಹರಡುವ ಸಮಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ವಿಪಕ್ಷದಲ್ಲಿ ಇದ್ದು ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡಬಹುದು ಅನ್ನುವುದು ಲಾಲಸ್ಯ. ಲಾಲಸ್ಯದಿಂದ ಯಡಿಯೂರಪ್ಪ ಅವರನ್ನ ಮಾತನಾಡುವುದು ಶೋಭೆ ತರಲ್ಲ. ಕೇಂದ್ರ ಸರ್ಕಾರದಿಂದ ಹಣ ತರುವುದರಲ್ಲಿ ಧಮ್ ಇಲ್ಲ ಅನ್ನುವುದು ಶೋಭೆ ತರುವ ಮಾತಲ್ಲ. ಜನರು ನಮಗೆ ಬಹುಮತ ನೀಡಿದ್ದರು, ಬೇರೆ ಮಾರ್ಗದಿಂದ ಅಧಿಕಾರಕ್ಕೆ ಏರಿದ್ದರು. ಈಗ ಅಧಿಕಾರ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ. ಇದರಿಂದ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆಂದು ಶ್ರೀರಾಮುಲು ಟೀಕಿಸಿದರು.