Posts Slider

Karnataka Voice

Latest Kannada News

ಶಿವಳ್ಳಿಯಲ್ಲಿ “ನಾನು” ಅಲ್ಲಾ “ನಾವೂ” ಟೀಂನಿಂದ ಉತ್ತಮ ಕಾರ್ಯ..!

1 min read
Spread the love

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಯುವಕರ ಪಡೆಯೊಂದು ಗ್ರಾಮದ ಸ್ವಚ್ಚತೆಯ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ನಾನು ಅಲ್ಲಾ ನಾವೂ ಎಂಬ ತಂಡವನ್ನ ಕಟ್ಟಿಕೊಂಡಿರುವ ಯುವಕರು, ಇಂದು ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನ ನಡೆಸಿದರು. ಈ ಕಾರ್ಯದಿಂದ ಗ್ರಾಮದಲ್ಲಿ ಹೊಸತನದ ಅಲೆ ಶುರುವಾಗಿದ್ದು, ಬಹುತೇಕ ಗ್ರಾಮಸ್ಥರು ಯುವಕರಿಗೆ ಶಹಬ್ಬಾಸ್ ಎನ್ನುವಂತಾಗಿದೆ.

ಗ್ರಾಮದ ನಿಂಗಪ್ಪ ಹೆಬ್ಬಳ್ಳಿ, ಮಲೀಕಜಾನ ಸಾಬಣ್ಣನವರ, ಮುತ್ತಪ್ಪ ಹಂಚಿನಮನಿ, ಮಂಜುನಾಥ ಚೆಲವಾದಿ, ದಾದಾಪೀರ ಸಾಬಣ್ಣನವರ, ಶ್ರೀಧರ ಬಿಲ್ಲಿಂಗನವರ, ಸದ್ದಾಂ ನದಾಫ ಯುವಕರ ತಂಡ ಉತ್ತಮ ಕಾರ್ಯವನ್ನ ಮಾಡಿದ್ದು, ಜನಮೆಚ್ಚುಗೆಗೆ ಕಾರಣವಾಗಿದೆ.

ಈಗಾಗಲೇ ಇದೇ ತಂಡ ಗ್ರಾಮದ ಸರಕಾರಿ ಶಾಲೆಯನ್ನೂ ಸ್ವಚ್ಚಗೊಳಿಸಿತ್ತು. ಯುವಕರು ಬೆಳ್ಳಂಬೆಳಿಗ್ಗೆಯೇ ಗ್ರಾಮದ ಅಭಿವೃದ್ಧಿಗೆ ಕನಸು ಕಂಡು ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ.


Spread the love

Leave a Reply

Your email address will not be published. Required fields are marked *