“ಶಿವಳ್ಳಿ”ಯಲ್ಲಿ ಐತಿಹಾಸಿಕ ಜಾತ್ರೆಗೆ ಕ್ಷಣಗಣನೆ… ಊರಿನ ಒಂದೇ ಒಂದು ಮನೆಯಲ್ಲೂ ‘ಹೊತ್ತಲ್ಲ ಒಲೆ’…
1 min readಧಾರವಾಡ: ಐತಿಹಾಸಿಕ ಕ್ಷಣಕ್ಕೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮ ಸಿದ್ಧಗೊಂಡಿದ್ದು, ಮೂರು ದಿನ ಇಡೀ ಊರಲ್ಲಿ ಒಲೆ ಹೊತ್ತಿಸದಿರುವುದಕ್ಕೆ ತೀರ್ಮಾನ ಮಾಡಲಾಗಿದೆ. ಅಷ್ಟೇ ಅಲ್ಲ, ಒಂದೇ ಸೂರಿನಡಿ ಪ್ರತಿಯೊಬ್ಬರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ತಮ್ಮೂರಿನ ಜಾತ್ರೆಯ ಬಗ್ಗೆ ಗ್ರಾಮದ ಪಂಚಾಯತಿ ಮಾಜಿ ಅಧ್ಯಕ್ಷ ರಾಜು ಮುದ್ದಿ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ್ರು. ಇಲ್ಲಿದೆ ನೋಡಿ ವೀಡಿಯೋ…
ಶಿವಳ್ಳಿ ಗ್ರಾಮದಲ್ಲಿ ಮೇ 18 ರಿಂದ ಮೇ 20 ರ ವರೆಗೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಮೂರು ದಿನದಲ್ಲಿ ಪ್ರತಿ ಸಂಜೆ ಧರ್ಮ ಸಭೆ ಆಯೋಜನೆ ಮಾಡಲಾಗಿದೆ. ಇದರಲ್ಲಿ ವಿವಿಧ ಪ್ರದೇಶದ ಪ್ರಮುಖ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.
ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಪ್ರತಿ ಅಮಾವಾಸ್ಯೆಯ ದಿನ ಅನ್ನ ಸಂತರ್ಪಣೆ ನಡೆಯುತ್ತಿದೆ. ಬೇರೆ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಬರುವುದು ವಾಡಿಕೆ. ಇಂತಹ ದೇವಸ್ಥಾನದ ಜಾತ್ರೆ ನಡೆಯುತ್ತಿರುವುದು ಹಲವು ವಿಶೇಷಗಳನ್ನ ಹೊಂದಿದೆ.
ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ಸೃಷ್ಡಿಯಾಗಿದ್ದು, ಜಾತಿ-ಮತ ಮರೆತು ಪ್ರತಿಯೊಬ್ಬರು ಗ್ರಾಮದ ಸ್ವಚ್ಚತೆಯಲ್ಲಿ ತೊಡಗಿದ್ದಾರೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪರಮೇಶ್ವರ ಧಾರವಾಡ, ಬಿಜೆಪಿ ಮುಖಂಡ ಶಿವು ಬೆಳಾರದ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಾನಂದ ಲಂಬಿ, ಗುರು ಹಿರೇಮಠ ಹಾಗೂ ಜಯಣ್ಣ ಮುದ್ದಿ ಭಾಗವಹಿಸಿದ್ದರು.