ದೇವರ ದ್ಯಾನ ಮಾಡಿ ಮಕ್ಕಳೊಂದಿಗೆ ಸಮಯ ಕಳೆದ ಶಾಸಕ: ಗ್ರಹಣ ಕಾಲದಲ್ಲಿ ಜನರಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ

ಗೋಕರ್ಣ: ನವಲಗುಂದ ಕ್ಷೇತ್ರದ ಬಿಜೆಪಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಕುಟುಂಬ ಸಮೇತರಾಗಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕೊರೋನಾ ಸಮಯದಲ್ಲಿ ಜನರಿಗೆ ಒಳ್ಳೆಯದಾಗಲಿ ಎಂದು ಪೂಜೆಯನ್ನ ಸಲ್ಲಿಸಿದ ನಂತರ ಬೀಚ್‌ನಲ್ಲಿ ಜಪ, ಧ್ಯಾನ ನಡೆಸಿದ್ದಾರೆ. ದೋಷ ನಿವಾರಣೆ ಹಾಗೂ ಪುಣ್ಯ ಪ್ರಾಪ್ತಿಗಾಗಿ ಗೋಕರ್ಣ ಬೀಚ್‌ನಲ್ಲಿ ಸಮುದ್ರ ಸ್ನಾನ ನಡೆಸಿದ ಶಾಸಕರು, ಕುಟುಂಬ ಸಮೇತರಾಗಿ ಆಗಮಿಸಿದ್ದರು. ಈ ವೇಳೆ ಕ್ಯಾಮೆರಾ ಕಾಣುತ್ತಿದ್ದಂತೇ, ಕೆಲವರು ಇದನ್ನ ಕಾಂಟ್ರೋವರ್ಸಿ ಮಾಡೋ ಪ್ರಯತ್ನಕ್ಕೆ ಇಳಿತಾರೆ. ಹೀಗಾಗಿ ಶೂಟಿಂಗ್ ಮಾಡದಂತೆ ವಿನಂತಿಸಿದರು. ಗ್ರಹಣದ ಹಿನ್ನೆಲೆಯಲ್ಲಿ ಗೋಕರ್ಣ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ದೇವಳ ಪ್ರವೇಶದ ಮುನ್ನ ಗೋಕರ್ಣ ಬೀಚ್‌ನಲ್ಲಿ ದಡದಲ್ಲಿ ಕುಳಿತು ದೇವರ ಧ್ಯಾನ ಮುಂದುವರಿಸಿದ್ದರು. ಬಳಿಕ ಕುಟುಂಬ ಸದಸ್ಯರ ಜತೆ ಸಮುದ್ರದ ನೀರಿನಲ್ಲಿ ಆಟವಾಡತೊಡಗಿದರು.