ಸೇವಾಭಾರತಿ ಟ್ರಸ್ಟ್ ಗೆ ಅಂಬ್ಯುಲೆನ್ಸ್ ದೇಣಿಗೆ ನೀಡಿದ ಗುಜ್ಜಾಡಿ ಸ್ವರ್ಣ ಜ್ಯುವೇಲರ್ಸ್….!

ಹುಬ್ಬಳ್ಳಿ: ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಸೇವಾಭಾರತಿ ಟ್ರಸ್ಟಗೆ ಗುಜ್ಜಾಡಿ ಸ್ವರ್ಣ ಜ್ಯವೇಲರ್ಸ್ ಪ್ರೈ ಲಿಮಿಟೆಡ್ ಸುಸಜ್ಜಿತ ಅಂಬ್ಯುಲೆನ್ಸ್ ನ್ನ ಇಂದು ದೇಣಿಗೆಯನ್ನ ನೀಡಿತು.
ಹುಬ್ಬಳ್ಳಿಯ ಬಿವಿಬಿ ಸೇವಾಭಾರತಿ ಕೋವಿಡ್ ಕೇರ್ ಸೆಂಟರ್ ಬಳಿ ನಡೆದ ಕಾರ್ಯಕ್ರಮದಲ್ಲಿ ಅಂಬ್ಯುಲೆನ್ಸ್ ನ್ನ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಂಗೇಶ ಬೆಂಡೆ, ಗೋಪಾಲಕೃಷ್ಣ ನಾಯಕ, ಶ್ರೀಧರ ನಾಡಗೇರ, ರಘು ಅಕಮಂಚಿ, ಗೋವರ್ಧನ ರಾವ್, ಸಂದೀಪ ಬೂದಿಹಾಳ, ಉಮೇಶ ಧುಷಿ, ಜಯತೀರ್ಥ ಕಟ್ಟಿ, ಚಂದ್ರಶೇಖರ ಗೋಕಾಕ ಉಪಸ್ಥಿತರಿದ್ದರು.
ಸೇವಾ ಭಾರತಿ ಟ್ರಸ್ಟ್ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಾಗೇ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದ್ದು, ಹಲವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಇದರಿಂದ ಮತ್ತಷ್ಟು ಜನರಿಗೆ ಅನುಕೂಲ ಸಿಗಲಿ ಎಂಬ ಉದ್ದೇಶದಿಂದ ಅಂಬ್ಯುಲೆನ್ಸ್ ನ್ನ ನೀಡಲಾಗಿದೆ.