Posts Slider

Karnataka Voice

Latest Kannada News

ಒಂದೇ ಊರು ಒಂದೇ ಶಾಲೆ-27 ವರ್ಷ ಸೇವೆ: ನಿವೃತ್ತ ಶಿಕ್ಷಕರಿಗೆ ಸಿಕ್ಕ ಗೌರವವೇನು ಗೊತ್ತಾ..!

1 min read
Spread the love

ಧಾರವಾಡ: ಓರ್ವ ಶಿಕ್ಷಕ ಒಂದೂರಲ್ಲಿ ಎಷ್ಟು ದಿನ ಸೇವೆ ಸಲ್ಲಿಸಬಹುದು.. ಒಂದು.. ಎರಡು.. ಮೂರು.. ಐದು.. 10.. ಇರಬಹುದಲ್ವೇ. ಆದರೆ, ಇಲ್ಲೋಬ್ಬ ಶಿಕ್ಷಕ ಬರೋಬ್ಬರಿ 27 ವರ್ಷ ಒಂದೇ ಗ್ರಾಮದಲ್ಲಿ ಸೇವೆಯನ್ನ ಮಾಡಿ, ಅಲ್ಲಿಯೇ ನಿವೃತ್ತಿಯಾಗಿದ್ದಾರೆ. ಅಂತಹದೊಂಡು ವಿಶೇಷತೆ ಆಚರಣೆ ಮಾಡಲು ಅಲ್ಲಿ ಎಲ್ಲ ಸುಂದರ ಮನಸ್ಸುಗಳು ಒಗ್ಗಟ್ಟಾಗಿದ್ದವು.

ಅದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮ. ಇಲ್ಲಿನ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿ.ಎನ್.ಪಾಟೀಲರೇ, ಇಷ್ಟೊಂದು ಅಚ್ಚರಿಯನ್ನ ನೀಡಿದ ಶಿಕ್ಷಕರು. ದೂರಿದ ಯರೀನಾರಾಯಣಪುರದ ಪಾಟೀಲರು ಶಿಕ್ಷಕರಾಗಿ ಸೇರಿಕೊಂಡಿದ್ದು ಇದೇ ಬ್ಯಾಹಟ್ಟಿಯ ಸರಕಾರಿ ಶಾಲೆಗೆ, ನಿವೃತ್ತಿಯಾಗಿದ್ದು ಇದೇ ಶಾಲೆಯಿಂದಲೇ. ಇದಕ್ಕೆ ಕಾರಣವಾಗಿದ್ದು, ವಿ.ಎನ್.ಪಾಟೀಲರ ಶಿಕ್ಷಣ ಪ್ರೇಮ ಮತ್ತೂ ಮಕ್ಕಳ ಮೇಲಿನ ಅತೀವ ನಂಬಿಕೆ.

ವಿ.ಎನ್.ಪಾಟೀರಲು ಶಾಲೆಗೆ ಬಂದ ಮೇಲೆ ಬ್ಯಾಹಟ್ಟಿಯ ಕೀರ್ತಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜಯಯಾಗುವಂತೆ ಮಾಡಿತು. ತಮ್ಮ ಮೂರು ಹೆಣ್ಣು ಮಕ್ಕಳನ್ನ ರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿ ಮಾಡಿದ ಕೀರ್ತಿಯೂ ಶಿಕ್ಷಕ ಪಾಟೀರದ್ದು.

ಪಾಟೀಲರ ಶಾಲೆಯ ವಿದ್ಯಾರ್ಥಿಗಳನ್ನ ಸೋಲಿಸಬೇಕು ಎಂದುಕೊಂಡು ಇನ್ನುಳಿದ ಶಾಲೆಯ ಶಿಕ್ಷಕರು ಅಂದುಕೊಳ್ಳುತ್ತ ಬಂದಿದ್ದಾರೆ ಹೊರತೂ ಅವರನ್ನ ಸೋಲಿಸುವುದಕ್ಕೆ ಆಗಲೇ ಇಲ್ಲ. ಪಾಟೀಲ ಸರ್ ಅಂದ್ರೇ ಅದೊಂದು ಮಾನವೀಯತೆಯ ಕಣಜ ಅನ್ನೋದು ಎಲ್ಲರ ಮಾತು.

ಇಂತಹ ಮಹಾನ್ ಸಾಧಕ ಶಿಕ್ಷಕ ವಿ.ಎನ್.ಪಾಟೀಲರಿಗೆ ನಿವೃತ್ತಿಗೆ ಶುಭ ಹಾರೈಸಲು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕೆಜಿಎಸ್ ಬ್ಯಾಹಟ್ಟಿಯ ಪ್ರಧಾನ ಗುರುಗಳಾದ ಎನ್.ಎಸ್.ಪಾಟೀಲ, ಕೆಬಿಎಸ್ ಬ್ಯಾಹಟ್ಟಿಯ ಪ್ರಧಾನ ಗುರುಗಳಾದ ಭೋವಿ, ಹುಬ್ಬಳ್ಳಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಹುಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ ಅಧ್ಯಕ್ಷ ಜಿ.ಎಲ್.ಸತ್ಯನ್ನವರ, ಧಾರವಾಡ ಜಿಲ್ಲಾ ಅಧ್ಯಕ್ಷ ವಿ.ಎಫ್.ಚುಳಕಿ, ಪ್ರಾಥಮಿಕ ಶಾಲಾ ಗ್ರೇಡ್-2 ಮಹಿಳಾ ಘಟಕದ ರಾಜ್ಯಾಧ್ಯಕ್ಷ ಡಾ, ಆಶಾಬೇಗಂ ಮುನವಳ್ಳಿ,  ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಜಿ.ತೊಗರಿ, ತಾಪಂ ಸದಸ್ಯೆ ಸರೋಜಾ,  ಹುಬ್ಬಳ್ಳಿ ಗ್ರಾಮೀಣ ದೈಹಿಕ ಶಿಕ್ಷಕ ಪರಿವೀಕ್ಷಕರಾದ ಎಸ್.ಸಿ.ಗುಂಡಾರ, ಉಪನ್ಯಾಸಕ ಎಂ.ವೈ.ಹುಬ್ಬಳ್ಳಿ, ಮೊಕಾಸಿ, ಭಗವಂತಗೌಡ್ರ, ದಾಸರ, ಹೆಸರೂರ, ರವಿ ತೆಗ್ಗಿನಕಾರಿ, ಪವಾಡಿಶೆಟ್ರ, ಕಮತ , ನಾಗೂರ, ಗಂಗನಗೌಡ್ರ, ಬಣವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *