Posts Slider

Karnataka Voice

Latest Kannada News

ರಾಜ್ಯದಲ್ಲಿ ನ.17ರಿಂದ ಪದವಿ ಕಾಲೇಜ್-ಗೋವಾದಲ್ಲಿ ನ.21ರಿಂದ 10,12 ಶಾಲೆ ಆರಂಭ

1 min read
Spread the love

ಬೆಂಗಳೂರು-ಪಣಜಿ: ರಾಜ್ಯದಲ್ಲಿ ಇನ್ನೂ ಆರು ದಿನಗಳಲ್ಲಿ ಪದವಿ ಕಾಲೇಜು ಆರಂಭ ಮಾಡಲು ಸರಕಾರ ಸಿದ್ಧವಾಗಿದ್ದು, ಅದೇ ಸಮಯದಲ್ಲಿ ಗೋವಾ ಕೂಡಾ ನವೆಂಬರ್ 21ರಿಂದ 10 ಮತ್ತು 12ನೇ ತರಗತಿಗಳಿಗೆ ಶಾಲೆ ಆರಂಭ ಮಾಡಲು ನಿರ್ಧರಿಸಿದೆ.

ಗೋವಾ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿದ್ದು, ಒಂದು ತರಗತಿಯಲ್ಲಿ ಕೇವಲ 12 ಜನ ಮಾತ್ರ ಹಾಜರಾಗ ಬೇಕಾಗಿ ತಿಳಿಸಿದೆ. ಆದರೆ, ರಾಜ್ಯದಲ್ಲಿ ಪದವಿ ಕಾಲೇಜು ಆರಂಭಕ್ಕೆ ಹಲವು ನಿರ್ದೇಶನಗಳನ್ನ ನೀಡಿದೆ. ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೂ ಶಿಕ್ಷಣವನ್ನ ಪಡೆಯಬಹುದಾಗಿದೆ.

ಗೋವಾ ಎಸ್‌ಒಪಿ ಪ್ರಕಾರ, ಒಂದು ತರಗತಿಯಲ್ಲಿ 12 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಮತ್ತು ತರಗತಿಗಳು ಬೆಸ-ಸಮ ಸೂತ್ರ ವನ್ನು ಅನುಸರಿಸಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೌಶಲ್ಯ ಆಧಾರಿತ ತರಬೇತಿಗಾಗಿ ಕಾರ್ಯಾಗಾರಗಳು/ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಸಾಧನಗಳನ್ನು ಬಳಸುವ ಮೊದಲು ಮತ್ತು ನಂತರ ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಮಾಸ್ಕ್ , ಹ್ಯಾಂಡ್ ಸ್ಯಾನಿಟೈಜರ್‌ಗಳು ಮುಂತಾದ ವೈಯಕ್ತಿಕ ಸಂರಕ್ಷಣಾ ವಸ್ತುಗಳ ಸೂಕ್ತ ಬ್ಯಾಕ್-ಅಪ್ ಸಂಗ್ರಹವಿರುವಂತೆ ನೋಡಿಕೊಳ್ಳಬೇಕು.


Spread the love

Leave a Reply

Your email address will not be published. Required fields are marked *