ಪ್ರಾಥಮಿಕ- ಪ್ರೌಢಶಾಲೆ ಆರಂಭ: ನಾಳೆ ಮಹತ್ವದ ಸಭೆ
1 min readಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಂದ್ ಆಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆರಂಭ ಮಾಡುವ ಸಂಬಂಧ ನಾಳೆ ಮಹತ್ವದ ಸಭೆಯನ್ನ ಕರೆಯಲಾಗಿದ್ದು, ಸಿಎಂ ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ಅವಧಿ ಮುಗಿಯಲು ಇನ್ನೂ ನಾಲ್ಕೇ ತಿಂಗಳು ಬಾಕಿಯಿದ್ದು, ಹೀಗಾಗಿಯೇ ನಾಳೆಯ ಸಭೆಯ ಮಹತ್ವ ಪಡೆದಿದೆ. ನಾಳೆ ಮಧ್ಯಾಹ್ನ 12ಗಂಟೆಗೆ ವಿಧಾನಸೌಧದ ಕೊಠಡಿ 313ರಲ್ಲಿ ನಡೆಯಲಿದ್ದು, ಸ್ವತಃ ಸಿಎಂ ಅವರೇ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರು ಈಗಾಗಲೇ ಶಾಲೆ ಆರಂಭಿಸುವ ಬಗ್ಗೆ ಹಲವು ರೀತಿಯ ಚರ್ಚೆಗಳನ್ನ ನಡೆಸಿದ್ದಾರೆ. ಪ್ರತಿ ಜಿಲ್ಲಾವಾರು ಉಪನಿರ್ದೇಶಕರಿಂದ ಮಾಹಿತಿಯನ್ನ ಸಂಗ್ರಹ ಮಾಡಿದ್ದಾರೆ.
ಈಗಲೂ ಶಾಲೆ ಆರಂಭಿಸದೇ ಇದ್ದರೇ ಯಾವ ಥರದಿಂದ ಶಿಕ್ಷಣವನ್ನ ಮಕ್ಕಳಿಗೆ ಕೊಡಬೇಕು. ಶಾಲೆ ಆರಂಭಿಸುವುದಾದರೇ ಏನೇಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ನಿರ್ಧಾರಗಳು ಹೊರಬರುವ ಸಾಧ್ಯತೆಯಿವೆ.