ಸಾರಿಗೆ ಬಸ್ ಆರಂಭಿಸಲು ಮನವಿ ಮಾಡಿಕೊಂಡ ಲಕ್ಷ್ಮಣ ಸವದಿ: ಗಡ್ಕರಿಗೆ ಪತ್ರ

ಬೆಂಗಳೂರು: ಕರ್ನಾಟಕದಲ್ಲಿ ಸಾರಿಗೆ ಇಲಾಖೆಯ ಬಸ್ ಗಳ ಸಂಚಾರಕ್ಕೆ ಅನುಮತಿ ಕೊಡುವಂತೆ ಕೋರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ರಾಜ್ಯದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪತ್ರ ಬರೆದಿದ್ದಾರೆ.
ಕೆಎಸ್ಸಾಆರ್ಟಿಸಿಯಲ್ಲಿ 24900 ಬಸ್ ಗಳಿದ್ದು ಪ್ರತಿದಿನ 71ಲಕ್ಷ ಕಿಲೋಮೀಟರ್ ಸಂಚಾರ ಮಾಡುತ್ತಿವೆ. ಪ್ರತಿದಿನ 98 ಲಕ್ಷ ಜನ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಕೊರೋನಾ ವೈರಸ್ ಲಾಕ್ ಡೌನ್ ದಿಂದ 1600 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ನೌಕರರಿಗೆ ಪೆನಷನ್ ಮತ್ತು ಇತರೇ ಸೌಲಭ್ಯ ಕೊಡಲು ತೊಂದರೆಯಾಗುತ್ತಿದೆ. ಸಾರಿಗೆ ಇಲಾಖೆಯ ನಾಲ್ಕು ವಿಭಾಗದಲ್ಲಿ ತೊಂದರೆ ಹೆಚ್ಚುತ್ತಿರುವುದರಿಂದ ಆದಷ್ಟು ಬೇಗನೇ ಇದಕ್ಕೊಂದು ನಿರ್ಧಾರ ತೆಗೆದುಕೊಳ್ಳಬೇಕೆಂದು ಸಾರಿಗೆ ಮಂತ್ರಿ ಸವದಿ ಮನವಿ ಮಾಡಿಕೊಂಡಿದ್ದಾರೆ.