ಧಾರವಾಡಕ್ಕಂಟಿಕೊಂಡೇ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು
ಧಾರವಾಡ ತಾಲೂಕಿನ ಕಬ್ಬೇನೂರ ಗ್ರಾಮದ ಜಮೀನಿಗಳಿಗೆ ಅಂಟಿಕೊಂಡೇ ಇರುವ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ದುರ್ಘಟನೆ
ಬೆಳಗಾವಿ: ಹೊಲಕ್ಕೆ ಕೆಲಸಕ್ಕೆ ತೆರಳಿದ್ದಾಗ ಗುಡುಗ ಸಹಿತ ಮಳೆ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸಾವನ್ನಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಯಲ್ಲವ್ವಾ ಇಂಚಲ ಹಾಗೂ ಭಾಗವ್ವ ಹೊಸಮನಿ ಮೃತ ದುರ್ದೈವಿಗಳು. ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆ ನಾಲ್ಕೈದು ಜನರು ಸೇರಿಕೊಂಡು ಮಳೆಗೆ ಆಶ್ರಯ ಪಡೆಯಲು ಮರದ ಕೇಳಗೆ ನಿಂತುಕೊಂಡಿದ್ದರು.
ಈ ವೇಳೆ ಸಿಡಿಲು ಬಡಿದು ಮಹಿಳೆಯರಿಬ್ಬರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನೆಯ ಸುದ್ದಿ ತಿಳಿಯುತ್ತಳೇ ಸ್ಥಳೀಯರು ಆಗಮಿಸಿದ್ದು, ಅಷ್ಟರಲ್ಲೇ ಪೊಲೀಸರು ಆಗಮಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ಸವದತ್ತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.