ವಿನಯ ಕುಲಕರ್ಣಿ ಬ್ಯಾಡ್ ಟೈಮ್: ನಾನೂ ಜೊತೆಗಿದ್ದೇನೆ- ಸಂತೋಷ ಲಾಡ
1 min readಧಾರವಾಡ: ಭಾರತೀಯ ಜನತಾ ಪಕ್ಷ ಕಳೆದ ಆರು ವರ್ಷದಿಂದ ದೇಶದಲ್ಲಿ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ವಿನಯ ಕುಲಕರ್ಣಿ ಬ್ಯಾಡ್ ಟೈಮ್ ಇದೆ. ನಾವೇಲ್ಲರೂ ಅವರ ಜೊತೆಗಿದ್ದೇವೆ. ಕಾನೂನಿನ ಮೂಲಕ ಯಾವ ಥರದ ಹೋರಾಟ ಮಾಡಬೇಕೋ ಆ ಥರ ಮಾಡುತ್ತೇವೆ ಎಂದು ಮಾಜಿ ಸಚಿವ ಸಂತೋಷ ಲಾಡ ಹೇಳಿದರು.
ಸಂತೋಷ ಲಾಡ ಹೇಳಿದ್ದೇನು.. ಇಲ್ಲಿದೆ ನೋಡಿ..
ಸಿಬಿಐ ವಶದಲ್ಲಿರುವ ವಿನಯ ಕುಲಕರ್ಣಿ ಕುಟುಂಬಕ್ಕೆ ಭೇಟಿಯಾಗಲು ಧಾರವಾಡದ ಬಾರಾಕೋಟ್ರಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದ ಸಂತೋಷ ಲಾಡ, ಕೆಲವು ಸಮಯ ವಿನಯ ಕುಲಕರ್ಣಿ ಕುಟುಂಬದ ಜೊತೆ ಮಾತನಾಡಿದ್ರು. ನಾವೂ ಸದಾಕಾಲ ಈ ಕುಟುಂಬದ ಜೊತೆ ಇರುವುದಾಗಿಯೂ ಹೇಳಿ, ಮನೆಯವರಿಗೆ ಧೈರ್ಯದಿಂದ ಇರುವಂತೆ ಕೇಳಿಕೊಂಡಿದ್ದಾರೆ.
ಕೇಂದ್ರ ಸರಕಾರಗಳು ಸಿಬಿಐಗಳನ್ನ ದುರ್ಬಳಕೆ ಮಾಡಿಕೊಂಡಿವೆ. ವಿನಯ ಕುಲಕರ್ಣಿ ಮತ್ತು ಅವರ ಕುಟುಂಬದ ಜೊತೆಗೆ ನಾವಿದ್ದೇವೆ. ಈ ವಿಷಯವನ್ನ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ವಿನಯ ಕುಲಕರ್ಣಿ ಕುಟುಂಬದವರು ಸಾಕಷ್ಟು ನೊಂದಿದ್ದಾರೆ. ಅವರ ಯಾವುದೇ ಥರದ ನೋವಿನಲ್ಲೂ ನಾವೂ ಭಾಗಿ. ನಾವೆಲ್ಲರೂ ಕೂಡಿಕೊಂಡು ಇರುತ್ತೇವೆ ಎಂದರು.