ಸಂತೋಷ ಚವ್ಹಾಣ, ಬೀರಪ್ಪ ಖಂಡೇಕರ ದೃಢ ನಿರ್ಧಾರ: ಸಚಿವ ಸಂಪುಟದ ನಿರ್ಧಾರಕ್ಕೆ “ಹೈಕೋರ್ಟ್” ಬ್ರೇಕ್…!!!

ಬೆಂಗಳೂರು: ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಜಾಗೆಯನ್ನ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದನ್ನ ಪ್ರಶ್ನಿಸಿ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹಾಗೂ ಬೀರಪ್ಪ ಖಂಡೇಕರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಪರಿಗಣಿಸಿದ ಬೆಂಗಳೂರು ಹೈಕೋರ್ಟ್, ಸಂಪುಟದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿದೆ.
ಕೇಶ್ವಾಪುರದ ವಾಟರ್ ಟ್ಯಾಂಕ್ ಬಳಿಯ ಜಾಗೆಯಲ್ಲಿ ಕಚೇರಿ ನಿರ್ಮಾಣ ಮಾಡುವುದು ಕಾನೂನು ಬಾಹಿರವಾಗಿದೆ. ಇದಕ್ಕೆ ಅವಕಾಶ ನೀಡಬಾರದೆಂದು ಕೇಳಿಕೊಳ್ಳಲಾಗಿತ್ತು. ಅರ್ಜಿಯನ್ನ ಆಲಿಸಿದ ಹೈಕೋರ್ಟ್ ಕಾಂಗ್ರೆಸ್ ಪಕ್ಷದ ಕಚೇರಿ ಆಗದಂತೆ ತಡೆಯಾಜ್ಞೆ ನೀಡಿದೆ.
ಅರ್ಜಿದಾರರಾದ ಸಂತೋಷ ಚವ್ಹಾಣ ಹಾಗೂ ಬೀರಪ್ಪ ಖಂಡೇಕರ ಪರವಾಗಿ ಬೆಂಗಳೂರಿನ ಧ್ತಾನಚಂದ ಹಾಗೂ ಸಂಜೀವ ಬಡಸ್ಕರ ವಾದ ಮಂಡಿಸಿದ್ದರು.