ಹುಬ್ಬಳ್ಳಿಯಲ್ಲಿ ಹೆಸರಷ್ಟೇ ‘ಸಂಜೀವಿನಿ” ಇನ್ನೂ ಉಳಿದಿದ್ದು ಕಣ್ಣೀರು ಮತ್ತೂ ಪೊಲೀಸು…!
1 min readಹುಬ್ಬಳ್ಳಿ: ಆಸ್ಪತ್ರೆಗೆ ದಾಖಲಾದ ಮಹಿಳೆ ಮೃತಪಟ್ಟ ನಂತರವೂ ಹಣ ನೀಡದೆ ಶವವನ್ನ ಕೊಡುವುದಿಲ್ಲವೆಂದು ಆಸ್ಪತ್ರೆಯವರು ತಗಾದೆ ತೆಗೆದಿದ್ದಾರೆಂದು ಕುಟುಂಬದವರು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿದ ಘಟನೆ ಸಂಜೀವಿನಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಮೇ 27 ರಂದು ಆಸ್ಪತ್ರೆಗೆ ದಾಖಲಾಗಿದ್ದ ನಸೀಮಾಭಾನು ಜಮಿಲ್ ಅಹ್ಮದ ಶೇಖ, ಎನ್ನುವವರು ಗುರುವಾರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಆದರೆ, ಅಷ್ಟರಲ್ಲಿಯೇ 227250 ರೂಪಾಯಿ ಬಿಲ್ ಆಗಿದೆ. ಮೊದಲು ಕೊಟ್ಟಿದ್ದ 80 ಸಾವಿರ ರೂಪಾಯಿ ಮೈನಸ್ ಮಾಡಿದ್ರೂ, 147250 ರೂಪಾಯಿ ಕೊಟ್ಟರೇ ಮಾತ್ರ ಶವವನ್ನ ಕೊಡುವುದಾಗಿ ಮೃತಳ ಕುಟುಂಬದವರಿಗೆ ಆಸ್ಪತ್ರೆಯವರು ಹೇಳಿದರಂತೆ.
ಈ ಗೊಂದಲ ನಿವಾರಣೆಗೆ ಪೊಲೀಸರೇ ಬಂದು ಶವವನ್ನ ಕೊಡಿಸುವ ಪ್ರಯತ್ನಕ್ಕೆ ಇಳಿದರು. ಅಷ್ಟೇ ಅಲ್ಲ, ಕೆಲವು ಮುಂಗೋಪಿಗಳು ಇದನ್ನೇಲ್ಲ ಚಿತ್ರೀಕರಣ ಮಾಡುತ್ತಿರುವ ಮಾದ್ಯಮದವರ ಮೇಲೆ ತಮ್ಮತನ ತೋರಿಸುವ ಪ್ರಯತ್ನ ಮಾಡಿದ ಘಟನೆಯೂ ನಡೆದಿದೆ.
ಕೊರೋನಾ ಎಂಬ ಸಾಂಕ್ರಾಮಿಕ ರೋಗ, ಮನುಷ್ಯ ಇದ್ದಾಗಲೂ, ಇನ್ನಿಲ್ಲವಾದಾಗಲೂ ಬದುಕನ್ನ ನಾಶ ಮಾಡುತ್ತಿರುವುದಂತೂ ಸತ್ಯ.