2ವರ್ಷ ಶಿಕ್ಷೆ ಅನುಭವಿಸಿ ಬಂದವನಿಂದ ಹಫ್ತಾ ವಸೂಲಿ- ಮತ್ತೆ ಇಮ್ರಾನ್ ಮನಿಯಾರ ಜೈಲಿಗೆ
ಹುಬ್ಬಳ್ಳಿ: ಕೊಲೆಯತ್ನದ ಹಿನ್ನೆಲೆಯಲ್ಲಿ ಎರಡು ವರ್ಷದ ಜೈಲು ವಾಸ ಅನುಭವಿಸಿ ಇತ್ತೀಚೆಗೆ ಹೊರಗಡೆ ಬಂದಿದ್ದ ರೌಡಿ ಷೀಟರನೋರ್ವ ಮತ್ತೆ ಜೈಲು ಪಾಲಾದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ಹರಿತವಾದ ಆಯುಧಗಳನ್ನ ತೋರಿಸಿ ಹಪ್ತಾ ವಸೂಲಿಗೆ ನಿಂತಿದ್ದ ಇಮ್ರಾನ ಮನಿಯಾರ ಎಂಬಾತನೇ ಮತ್ತೆ ಜೈಲು ಪಾಲಾದ ರೌಡಿ ಷೀಟರ್. ಕೆಲವು ದಿನಗಳ ಹಿಂದಷ್ಟೇ ಎರಡು ವರ್ಷ ಜೈಲುವಾಸ ಅನುಭವಿಸಿ ಈತ ಹೊರಗಡೆ ಬಂದಿದ್ದ.
ಹಳೇಹುಬ್ಬಳ್ಳಿಯ ಕಿರಾಣಿ ಸೇರಿದಂತೆ ಇನ್ನುಳಿದ ಅಂಗಡಿಗಳಿಗೆ ಹೋಗಿ ಹಫ್ತಾ ಕೇಳುತ್ತಿದ್ದ. ಕೊಡದೇ ಇದ್ದರೇ ಅವರಿಗೆ ಚಾಕು, ಲಾಂಗು ತೋರಿಸಿ ಹಣವನ್ನ ಕಿತ್ತುಕೊಂಡು ಬರುತ್ತಿದ್ದ ಎಂದು ಮಾಹಿತಿ ಪಡೆದ ಹಳೇಹುಬ್ಬಳ್ಳಿ ಇನ್ಸಪೆಕ್ಟರ್ ಶಿವಾನಂದ ಕಮತಗಿ, ಇಮ್ರಾನ ಮನಿಯಾರ್ ಎಂಬಾತನನ್ನ ಬಂಧಿಸಿ, ಒಂದು ಲಾಂಗ್ ಮತ್ತು ಒಂದು ಚಾಕು ವಶಕ್ಕೆ ಪಡೆದಿದ್ದಾರೆ.
ರೌಡಿ ಷೀಟರಗಳ ಬಗ್ಗೆ ನಿಗಾಯಿಟ್ಟಿರುವ ಪೊಲೀಸರು, ಯಾವುದೇ ರೀತಿಯ ಕ್ರಿಮಿನಲ್ ಮೊಡಸ್ ಕಂಡು ಕೂಡಲೇ ಬಂಧಿಸಿ ಜೈಲಿಗೆ ಕಳಿಸುತ್ತಿದ್ದಾರೆ.