ಸಿಬಿಐನಿಂದ ಮಾಜಿ ಸಚಿವ ರೋಷನ್ ಬೇಗ್ ಬಂಧನ- ಐಎಂಐ ಹಗರಣ
1 min readಬೆಂಗಳೂರು: ಸಾವಿರಾರೂ ಜನರು ಹೂಡಿಕೆ ಮಾಡಿದ್ದ ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನಬೇಗ್ ಅವರನ್ನ ಸಿಬಿಐ ಬಂಧನ ಮಾಡಿದೆ.
ಇಂದು ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದ್ದ ಸಿಬಿಐ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹದಿನಾಲ್ಕು ದಿನದವರೆಗೆ ರೋಷನ್ ಬೇಗ್ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ರೋಷನ್ ಬೇಗ್ ಅವರನ್ನ ಕಳಿಸಲಾಗಿದೆ.
ಮಾಜಿ ಸಚಿವ ರೋಷನ್ ಬೇಗ್ ಅವರ ಹೆಸರು ಮೊದಲಿನಿಂದಲೂ ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ನೂರಾರು ಕೋಟಿ ವ್ಯವಹಾರ ನಡೆದಿವೆ ಎಂಬ ವದಂತಿಗಳು ಕೂಡಾ ಹಬ್ಬಿದ್ದವು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಈ ಹಗರಣ ಹೊರಗೆ ಬಂದಿತ್ತಾದರೂ ಆಗಿನಿಂದಲೇ ರೋಷನ್ ಬೇಗ್ ಕಾಂಗ್ರೆಸ್ಸಿನಿಂದ ದೂರವಾಗಿ ಬಿಜೆಪಿ ಬಳಿ ಸುಳಿದಾಡಿದ್ದರು. ಆದರೆ, ಅಧಿಕೃತವಾಗಿ ಬಿಜೆಪಿ ರೋಷನ್ ಬೇಗ್ ಅವರನ್ನ ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ.