Posts Slider

Karnataka Voice

Latest Kannada News

“RR” ಓಕೆ… ಮೌನೀಶ ಮೌದ್ಗಿಲ್ ಯಾಕೆ: ಇದು “ಒಂದು ಐಪಿಎಸ್-ಎರಡು ಐಎಎಸ್” ಕಹಾನಿ…

1 min read
Spread the love

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಐಎಎಸ್ ಆದಿಕಾರಿ ರೋಹಿಣಿ ಸಿಂಧೂರಿಯವರ ಕೆಲವು ವಿಷಯಗಳನ್ನ ಪೋಸ್ಟ್ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನ ವರ್ಗಾವಣೆ ಮಾಡುವ ಜೊತೆಗೆ ಡಿ.ರೂಪಾ ಅವರ ಪತಿ ಮೌನೀಶ ಮೌದ್ಗಿಲ್ ಅವರನ್ನೂ ಸರಕಾರ ವರ್ಗಾವಣೆ ಮಾಡಿರುವುದನ್ನ ನೋಡಿದ್ರೇ “ಕುಚ್ ಕಾಲಾ” ಕಾಣತೊಡಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬೆಂಗಳೂರಿಗೆ ಹೋದ ನಂತರ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಪ್ರಮುಖ ಪ್ರಕರಣಗಳನ್ನ ಹೊರ ಹಾಕಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಐಎಎಸ್ ಆದಿಕಾರಿ ರೋಹಿಣಿ ಸಿಂಧೂರಿಯವರ ವಿರುದ್ಧ ಕೆಲವು ಆರೋಪಗಳನ್ನ ಮಾಡುತ್ತಲೇ ಬಂದಿದ್ದರು.

ಐಎಎಸ್ ಡಿ.ಕೆ.ರವಿ ಆತ್ಮಹತ್ಯೆಗೆ ಶರಣಾದ ಸಮಯದಲ್ಲಿ ಏನೂ ಮಾತಾಡದ ಐಪಿಎಸ್-ಐಎಎಸ್ ವರ್ಗ ಈಗ ಅದನ್ನ ಮುಂಚೂಣಿಗೆ ತರುವಲ್ಲಿ ಡಿ.ರೂಪಾ ಅವರು ಪರೋಕ್ಷವಾಗಿ ಕಾರಣವಾಗಿದ್ದಾರೆ.

ಡಿ.ಕೆ.ರವಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದು ಅದರಲ್ಲಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿಯ ಪಾತ್ರವನ್ನ ಪರಿಚಯಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, “ನಾನು ಸತ್ತ ನಂತರ, ನೀನು ಬಂದು ನನಗೆ ಮುತ್ತು ಕೊಡು” ಎಂದು ಡಿ.ಕೆ.ರವಿ ಅವರು ಆತ್ಮಹತ್ಯೆಗೆ ಮುನ್ನ ಸಂದೇಶ ಕಳಿಸಿರುವುದು ಬಹಿರಂಗವಾಗಿದೆ. ಆದರೆ, ಅಂತಹದೇ ಸ್ಥಿತಿ ಮತ್ತೆ ನಿರ್ಮಾಣವಾಗಿತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

ಮೂರ್ನಾಲ್ಕು ಐಎಎಸ್‌ಗಳಿಗೆ ಯೋಗ್ಯವಲ್ಲದ ಭಾವಚಿತ್ರಗಳನ್ನ ಕಳಿಸಿದ್ದಾರೆಂದು ಐಪಿಎಸ್ ಡಿ.ರೂಪಾ ಅವರು ಹೇಳಿಕೊಂಡಿದ್ದರು. ಆ ಮೂರ್ನಾಲ್ಕು ಜನರಲ್ಲಿ ಮೌನೀಶ ಮೌದ್ಗಿಲ್ ಕೂಡಾ ಒಬ್ಬರಾ ಎಂಬ ಪ್ರಶ್ನೆ ಇದೀಗ ಹೆಚ್ಚಾಗಿದೆ. ಅದಕ್ಕೆ ರೆಕ್ಕಪುಕ್ಕ ಹಚ್ಚಿದ್ದು ಸರಕಾರದ ವರ್ಗಾವಣೆ.

ಸಾರ್ವಜನಿಕರ ಹಿತ ಕಾಪಾಡುವ ಮಹಾನುಭಾವ ಮನಸ್ಸುಗಳು ಎಷ್ಟೊಂದು “ಹಾಳು” ಆಗಿವೆ ಮತ್ತೂ ಇಂಥವರು ಕಾನೂನು ಪಾಲನೆ ಮಾಡ್ತಾರೆ ಎಂಬ ಭಾವನೆಯಲ್ಲಿ ಬದುಕುತ್ತಿರುವ ಜನರೇ ಧನ್ಯರು.


Spread the love

Leave a Reply

Your email address will not be published. Required fields are marked *

You may have missed