ಕೊಲೆಗೆಡುಕ, ಭೂಗಳ್ಳರನ್ನ ಸೋಲಿಸೋಣ- 1650 ಕೋಟಿ ರೂ. ತಂದವರನ್ನ ಗೆಲ್ಲಿಸೋಣ…
1 min read
ಧಾರವಾಡ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದ ಹಾಗೇ ಪಕ್ಷಗಳು ಸಂಘಟನೆಗೆ ಒತ್ತು ಕೊಡುತ್ತಿದ್ದು, ಕ್ಷೇತ್ರಗಳ ವಿವಿಧ ಪ್ರದೇಶಗಳಲ್ಲಿ ಕಾರ್ಯಕರ್ತರಿಗೆ ಪ್ರಮಾಣ ಮಾಡಿಸುವುದು ಆರಂಭವಾಗಿದೆ.
ಹೌದು… ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಧಾರವಾಡ ಜಿಲ್ಲಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಅವರ ನೇತೃತ್ವದಲ್ಲಿ “ಒಂದು ಬೂತ್ ಹತ್ತು ಯೂತ್ಸ್” ಕಾರ್ಯಕ್ರಮ ನಡೆಸಲಾಯಿತು. ಈ ಸಮಯದಲ್ಲಿ ಅಮ್ಮಿನಬಾವಿ ಮತ್ತು ಕನಕೂರ ಪಂಚಾಯತಿ ವ್ಯಾಪ್ತಿಯ 262 ಯುವಕರು ಭಾಗವಹಿಸಿ, ಪ್ರಮಾಣ ಮಾಡಿದ್ರು.
ಯುವಕರು ತೆಗೆದುಕೊಂಡ ಪ್ರಮಾಣ ವಚನದಲ್ಲಿ ಏನೇನು ಅಂಶಗಳಿದ್ದವೂ ನೀವೇ ನೋಡಿ.. ಇದು ಕೇವಲ ಧಾರವಾಡ-71 ಮತಕ್ಷೇತ್ರದ ಪ್ರಮಾಣ…
ಧಾರವಾಡ-71 ಕ್ಷೇತ್ರದಲ್ಲಿ ಮತ್ತೊಮ್ಮೆ ಹಾಲಿ ಶಾಸಕ ಅಮೃತ ದೇಸಾಯಿ ಅವರನ್ನ ಗೆಲ್ಲಿಸುವ ಉಮೇದಿಯನ್ನ ಕಾರ್ಯಕರ್ತರಲ್ಲಿ ಮೂಡಿಸಲು ಯುವ ಮೋರ್ಚಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಮುಂದಾಗಿದ್ದಾರೆ.