ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಇನ್ನಿಲ್ಲ- ಫಲಿಸದ ಕೋವಿಡ್-19 ಚಿಕಿತ್ಸೆ
1 min readಮೈಸೂರು: ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಮೈಸೂರು ಪ್ರಜಾವಾಣಿ ಬ್ಯೂರೋ ದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ.
ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್ ಗೆ ಆರೋಗ್ಯ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂಧಿಸಲಿಲ್ಲ. ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು. ಪವನ್ ಬದುಕಿ ಬರಲೆಂದು ಪ್ರಾರ್ಥಿಸಿದ್ದು ಪ್ರಯೋಜನವಾಗಲಿಲ್ಲ.
ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ.
ಸಂತಾಪ…
ಪತ್ರಕರ್ತ ಪವನ್ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಇವರ ಅಗಲಿಕೆಯನ್ನ ತಡೆದುಕೊಳ್ಳುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.