ನವನಗರದ ಬಳಿ ಪಡಿತರ ಕಳ್ಳಕ್ಕಿ ವಶ- ಚಾಲಕ ವಶಕ್ಕೆ

ಹುಬ್ಬಳ್ಳಿ: ಸರಕಾರ ಬಡವರಿಗೆ ಕೊಡಮಾಡುವ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಪೊಲೀಸರು ದಾಳಿ ಮಾಡಿ ಸುಮಾರು 25 ಕ್ವಿಂಟಾಲ್ ಅಕ್ಕಿಯನ್ನ ವಶಪಡಿಸಿಕೊಂಡ ಘಟನೆ ನವನಗರದ ಎಪಿಎಂಸಿ ಬಳಿ ಸಂಭವಿಸಿದೆ.
ಗೂಡ್ಸ್ ಬೋಲೇರೊ ವಾಹನದಲ್ಲಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದ ಅಂದಾಜು 70ಸಾವಿರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನ ವಾಹನದ ಸಮೇತ ವಶಕ್ಕೆ ಪಡೆಯಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ರಾಮರಾಜನ್ ಪ್ರಕರಣವನ್ನ ಹಿಡಿದು, ನವನಗರ ಎಪಿಎಂಸಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಆಹಾರ ನಿರೀಕ್ಷಕರರನ್ನ ಕರೆದು ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದು, ಇದು ಎಲ್ಲಿಗೆ ಹೊರಟಿತ್ತು ಎಂಬುದರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಕ್ಕಿಯನ್ನ ಬಡವರಿಂದ ಖರೀದಿಸಿ, ಅದೇ ಅಕ್ಕಿಯನ್ನ ಪಾಲೀಸ್ ಮಾಡಿ, ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ಸಂಶಯವಿದ್ದು, ಪೊಲೀಸರ ತನಿಖೆಯನ್ನ ನಡೆಸುತ್ತಿದ್ದಾರೆ.