ರಾಮನಗರ-ಚೆನ್ನಪಟ್ಟಣ ಮಧ್ಯೆ ನಿಖಿಲ-ರೇವತಿ ಮದುವೆ
1 min readರಾಮನಗರ: ನಿಖಿಲ್ – ರೇವತಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮದುವೆ ನಡೆಯುವ ಸ್ಥಳವನ್ನ ಮಾಜಿ ಸಿಎಂ ಕುಮಾರಸ್ವಾಮಿ ವೀಕ್ಷಣೆ ನಡೆಸಿದರು. ವಧುವಿನ ತಂದೆ ಮಂಜುನಾಥ್ ಜೊತೆಗೂಡಿ ವೀಕ್ಷಣೆ ಮಾಡುತ್ತಿರುವ ಕುಮಾರಸ್ವಾಮಿ, ರಾಮನಗರ ಹೊರವಲಯದಲ್ಲಿರುವ ಜನಪದ ಲೋಕದ ಹಿಂಭಾಗದ ಜಾಗವನ್ನ ನೋಡಿದ್ರು.
ರಾಮನಗರ – ಚನ್ನಪಟ್ಟಣ ಮದ್ಯ ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ಇರಾದೆ ಹೊಂದಿರುವ ಎಚ್ ಡಿಕೆ, ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೆ ಸೇರಿದ ಜಾಗದ ಬಗ್ಗೆಯೂ ಮಾಹಿತಿ ಪಡೆದರು. ಏಪ್ರೀಲ್ 17ಕ್ಕೆ ನಿಗದಿಯಾಗಿರುವ ನಿಖಿಲ್ – ರೇವತಿ ವಿವಾಹಕ್ಕೆ ಅದ್ದೂರಿ ಸೆಟ್ ನಿರ್ಮಾಣವಾಗಲಿದೆ.