ದೈಹಿಕ ಶಿಕ್ಷಣ ಶಿಕ್ಷಕರ “ಐತಿಹಾಸಿಕ ಸಮ್ಮೇಳನ”ಕ್ಕೆ ಕ್ಷಣಗಣನೆ…
1 min read22ಕ್ಕೆ ಬೆಂಗಳೂರಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಮ್ಮೇಳನ
ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನ, ರಾಜ್ಯ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶಿಕ್ಷಕರ ಸದನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ ಕೊಂಡಾಪುರ ತಿಳಿಸಿದರು.
ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಉದ್ಘಾಟಿಸಲಿದ್ದು, ಸಚಿವ ರಾದ ಬಿ. ನಾಗೇಂದ್ರ, ಸತೀಶ ಜಾರಕಿಹೊಳಿ, ಡಿ.ಸುಧಾಕರ, ಮಂಕಾಳ ಎಸ್. ವೈದ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ನೂತನ ಒಂದು ಲಾಂಛನ ಲೋಕಾರ್ಪಣೆ ಮಾಡಲಾಗುವುದು.
ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಆಶಾಬೇಗಂ ಮುನವಳ್ಳಿ ಮಾತನಾಡಿ, ರಾಜ್ಯ ಉತ್ತಮ ದೈಹಿಕ ಶಿಕ್ಷಕ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶೈಕ್ಷಣಿಕ ಕಾರ್ಯಾಗಾರದಲ್ಲಿ “ಬದಲಾದ ಕ್ರೀಡಾ ಸೇವೆ ಸಲ್ಲಿಸಿದವರಿಗೆ ಇದುವರೆಗಿನ ನಿಯಮಗಳು” ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ಯಿಗಳು ಮಾತನಾಡಲಿದ್ದಾರೆ ಎಂದರು.
ಕಳೆದ 25 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಲ್ಲ. ಕೂಡಲೇ ಸರಕಾರ ನಮ್ಮ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕೆಂದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಿ ಸಮ್ಮೇಳನ ನಡೆಯುತ್ತಿದೆ ಎಂದರು.
ಎನ್.ಸಿ. ಪಾಟೀಲ, ಶಂಕರ ಕೋಮಾರ, ಝಕೀರಹುಸೇನ ಸುತಾರ, ಮಂಜುಳಾ ಹಾರಿಕೋಪ್ಪ, ವಜ್ರ ಮನೇಶ, ಎಚ್ ಎಮ್ ಶಿವಯೋಗಿ, ರಮಾ ಮಣಿ ಭಟ್ಟ, ಸ್ಮಿತಾ ಮಹಾಪುರುಷ ಇದ್ದರು.