ರಮೇಶಕುಮಾರ ರಾಜಕೀಯ ನಿವೃತ್ತಿ ಘೋಷಣೆ: ಕಲುಷಿತ ರಾಜಕೀಯದಿಂದ ಬೇಸರ
1 min readಕೋಲಾರ: ಹಿರಿಯ ರಾಜಕಾರಣಿ ಮಾಜಿ ಮಂತ್ರಿ, ಮಾಜಿ ಸ್ಪೀಕರ ರಮೇಶಕುಮಾರ ಅಚ್ಚರಿಯನ್ನುವಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲವೆಂದು ಹೇಳುವ ಜೊತೆಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಅಚ್ಚರಿಯ ವಿಚಾರವನ್ನ ಪ್ರಕಟಿಸಿದ ರಮೇಶಕುಮಾರ, ಗೌರವಯುತವಾಗಿ ರಾಜಕಾರಣದಿಂದ ನಿವೃತ್ತನಾಗುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದರು.
ರಾಜ್ಯದಲ್ಲಿ ರಾಜಕೀಯ ಮೌಲ್ಯ ಉಳಿದಿಲ್ಲ. ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ರಾಜಕೀಯದಲ್ಲಿ ನಾನು ಇಷ್ಟು ವರ್ಷ ನ್ಯಾಯಯುತವಾಗಿ ಬದುಕಿದ್ದೇನೆ. ಯಾರಿಂದಲೂ ಹಣ ತೆಗೆದುಕೊಂಡು ರಾಜಕೀಯ ಮಾಡಿಲ್ಲ. ನನ್ನ ತತ್ವಗಳಿಗೆ ನಿಷ್ಟನಾಗಿ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ರಮೇಶಕುಮಾರ ಹೇಳಿದರು.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರಮೇಶಕುಮಾರ ಅವರ ಈ ಹೇಳಿಕೆ ಕಾಂಗ್ರೆಸನಲ್ಲಿ ಸಂಚಲನ ಮೂಡಿಸಿದ್ದು, ಪ್ರಭಾವಿ ರಾಜಕಾರಣಿಯ ಜೊತೆ ಪಕ್ಷದ ಹಿರಿಯ ಮುಖಂಡರು ಮಾತನಾಡುವ ಇಚ್ಚೆಯನ್ನ ವ್ಯಕ್ತಪಡಿಸಿದ್ದಾರೆ.