ರಾಮದುರ್ಗದಲ್ಲಿ ರಮೇಶ ಶೆಟ್ಟರ ಕುಟುಂಬ ಆತ್ಮಹತ್ಯೆ

ಬೆಳಗಾವಿ: ತನ್ನ ಎರಡು ಪುಟ್ಟ ಕಂದಮ್ಮಗಳಿಗೆ ವಿಷಕೊಟ್ಟು ತಾವಿಬ್ಬರೂ ವಿಷ ಕುಡಿದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿ ಗೊಬ್ಬರದ ಮಳಿಗೆಯನ್ನ ಹೊಂದಿದ್ದ ಪ್ರವೀಣ ರಮೇಶ ಶೆಟ್ಟರ, ಅವರ ಪತ್ನಿ ರಾಜೇಶ್ವರಿ ಹಾಗೂ ಅವರಿಬ್ಬರು ಮಕ್ಕಳಾದ ಅಮೃತಾ ಮತ್ತು ಅದ್ವಿಕ್ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.
ಗೊಬ್ಬರ ಮಳಿಗೆಯಿಟ್ಟಿದ್ದರಿಂದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಪ್ರವೀಣ ಶೆಟ್ಟರ ಸಾವು, ಪಟ್ಟಣದಲ್ಲಿ ಅಚ್ಚರಿ ಮೂಡಿಸಿದ್ದು, ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾರೆಂಬುದು ತಿಳಿದು ಬಂದಿಲ್ಲ.
ರಾಮದುರ್ಗ ಠಾಣೆಯ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ಡೆತ್ ನೋಟ್ ಇದೇಯಾ ಎಂದು ಹುಡುಕಾಟ ನಡೆಸಿದ್ದಾರೆ.