ರಾಜು ಅಂಬೋರೆ ಮೇಲೆ ಅಟ್ರಾಸಿಟಿ ಕೇಸ್: ಗುತ್ತಿಗೆದಾರರ ಮೇಲೆ ಪಿಡಬ್ಲೂಡಿ ಅಧಿಕಾರಿಯ ದೂರು….!

ಧಾರವಾಡ: ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಯ ರಾಘವೇಂದ್ರ ದೊಡ್ಡಮನಿ ಎನ್ನುವವರೇ ದೂರು ನೀಡಿದ್ದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಗುತ್ತಿಗೆದಾರ ರಾಜು ಅಂಬೋರೆ ಹಾಗೂ ರಾಮು ದೊಡ್ಡಮನಿ ಎನ್ನುವವರ ಮೇಲೆ ದೂರು ನೀಡಲಾಗಿದೆ.

ದೂರು ಪಡೆದುಕೊಂಡಿರುವ ಪೊಲೀಸರು ರಾಮು ದೊಡ್ಡಮನಿ ಹಾಗೂ ರಾಜು ಅಂಬೋರೆ ಮೇಲೆ ಜಾತಿ ನಿಂದನೆ ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಎಸಿಪಿ ಅವರು ತನಿಖೆಯನ್ನ ಆರಂಭಿಸಿದ್ದು, ಆಪಾಧಿತರನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದರ ಹಿಂದೆ ಕೆಲವು ರೀತಿಯ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎನ್ನಲಾಗುತ್ತಿದೆ.
ಧಾರವಾಡದಲ್ಲಿ ಮೊದಲ ಬಾರಿಗೆ ಅಧಿಕಾರಿಯೋರ್ವರು ಗುತ್ತಿಗೆದಾರರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದು, ಇದರ ನಿಜವಾದ ಸ್ವರೂಪವೇನು ಎಂಬುದು ನಿಗೂಢವಾಗಿದೆ.