ರಾಣೆಬೆನ್ನೂರು ಬಳಿ ಸಿಡಿಲು- ಇಬ್ಬರು ರೈತರ ದುರ್ಮರಣ
ಹಾವೇರಿ: ಬಿತ್ತನೆ ಮಾಡಲು ಹೋಗಿದ್ದ ಇಬ್ಬರು ರೈತರು ಹೊಲದಿಂದ ಮರಳಿ ಬರುವಾಗ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಹೊರವಲಯದಲ್ಲಿರೋ ಹುಲ್ಲತ್ತಿ ಕ್ರಾಸ್ ಬಳಿ ಸಂಭವಿಸಿದೆ.
ರಾಣೆಬೆನ್ನೂರು ಪಟ್ಟಣದ ರೈತರಾದ ದಯಾನಂದಗೌಡ ಪಾಟೀಲ ಮತ್ತು ಪರಮೇಶಪ್ಪ ಕಾಳಮ್ಮನವರ ಮೃತ ರೈತರಾಗಿದ್ದು, ಬಿತ್ತನೆ ಮಾಡಿ ಬರುವಾಗ ಘಟನೆ ನಡೆದಿದೆ.
ನಿರಂತರವಾಗಿ ಮಳೆ ಬರುತ್ತಿರುವುದರಿಂದ ಬಿತ್ತನೆ ಕಾರ್ಯ ಮಾಡಿದರೇ ಒಳ್ಳೆಯದಾಗುತ್ತದೆ ಎಂದುಕೊಂಡು ಬಿತ್ತನೆಗೆ ಹೋಗಿದ್ದ ರೈತರಿಬ್ಬರು, ಸಿಡಿಲಿಗೆ ಬಲಿಯಾಗಿದ್ದು, ಕುಟುಂಬಸ್ಥರಲ್ಲಿ ನೋವನ್ನುಂಟು ಮಾಡಿದೆ.
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ರೈತರ ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.