Posts Slider

Karnataka Voice

Latest Kannada News

ಮತ್ತೆ ತಡೆಯಾಜ್ಞೆ- ಪುರಸಭೆ-ಪಟ್ಟಣಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನೆನೆಗುದಿಗೆ

Spread the love

ಬೆಂಗಳೂರು: ರಾಜ್ಯದ ಪುರಸಭೆಗಳ ಹಾಗೂ ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆಗಳನ್ನ ಪ್ರಕಟಿಸಿ, ಚುನಾವಣೆ ನಡೆಸುವಂತೆ ಸರಕಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದಕ್ಕೀಗ ತಡೆಯಾಜ್ಞೆಯಾಗಿದೆ.

ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎ.ವಿಜಕುಮಾರ ನಿರ್ದೇಶನ ನೀಡಿದ್ದು, ಮೀಸಲಾತಿ ಅಧಿಸೂಚನೆಗೆ ಉಚ್ಚ ನ್ಯಾಯಾಲಯವೂ ತಡೆಯಾಜ್ಞೆ ನೀಡಿದ್ದರಿಂದ ಮುಂದಿನ ಕ್ರಮವನ್ನ ಸ್ಥಗಿತಗೊಳಿಸುವಂತೆ ಕೋರಿದ್ದಾರೆ.

ಕಳೆದ 17ತಿಂಗಳುಗಳಿಂದ ಪುರಸಭೆ-ಪಟ್ಟಣ ಪಂಚಾಯತಿಯ ಚುನಾವಣೆ ನಡೆದರೂ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗಳು ನಡೆದಿಲ್ಲ. ಇದೇ ಕಾರಣದಿಂದಲೇ ಅಭಿವೃದ್ಧಿಗಳು ಕುಂಠಿತಗೊಂಡಿವೆ.

ಸರಕಾರ ಕೆಲವು ದಿನಗಳ ಹಿಂದೆ ಹೊರಡಿಸಿದ್ದ ಮೀಸಲಾತಿಯನ್ನ ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಕೆಲವರು ಹೋದ ಪರಿಣಾಮ, ಮೀಸಲಾತಿ ಪಟ್ಟಿಗೆ ತಡೆಯಾಜ್ಞೆ ಬಂದಿದ್ದು, ಇದೀಗ ಮತ್ತೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನೆನೆಗುದಿಗೆ ಬಿದ್ದಂತಾಯಿತು.


Spread the love

Leave a Reply

Your email address will not be published. Required fields are marked *