83 ವರ್ಷದ ಸ್ವಾಮಿ ಸ್ಟ್ಯಾನ್ ಬಿಡುಗಡೆ ಮಾಡಿ-ಧಾರವಾಡ ಸಮರಸ ವೇದಿಕೆ ಆಗ್ರಹ
1 min readಧಾರವಾಡ: ಭೀಮಾ ಕೋರೆಗಾಂವ ಸಂಭ್ರಮಾಚರಣೆಯಲ್ಲಿ ಬಂಧಿತರಾಗಿರುವ 83 ವರ್ಷದ ಸಾಮಾಜಿಕ ಹೋರಾಟಗಾರ ಮತ್ತು ಪ್ರಾಧ್ಯಾಪಕ ಸ್ವಾಮಿ ಸ್ಟ್ಯಾನ್ ಅವರನ್ನ ಬಿಡುಗಡೆ ಮಾಡಬೇಕೆಂದು ಧಾರವಾಡದ ಸಮರಸ ವೇದಿಕೆ ಇಂದು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.
ಮಾನವ ಹಕ್ಕುಗಳು ಮತ್ತು ದಮನಿರತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದ್ದ ಸ್ವಾಮಿ ಸ್ಟ್ಯಾನ್ ಅವರನ್ನ 2018ರಲ್ಲೇ ಬಂಧನ ಮಾಡಲಾಗಿದೆ. ಇವರ ವಿರುದ್ಧ ದೇಶ ವಿರೋಧಿ ಆರೋಪಗಳನ್ನ ಹೊರೆಸಲಾಗಿದೆ ಎಂದು ದೂರಿದ ಪ್ರತಿಭಟನಾನಿರತರು, ತಕ್ಷಣವೇ ಅವರನ್ನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಹೋರಾಟ ಮಾಡುವವರ ಶಕ್ತಿಯನ್ನ ಕುಂದಿಸುವ ಪ್ರಯತ್ನವನ್ನ ಬಿಡಬೇಕು. ಕಳೆದ ಎರಡು ವರ್ಷದಿಂದ ಬಂಧನದಲ್ಲಿರುವ ಸ್ವಾಮಿ ಸ್ಟ್ಯಾನ್ ಅವರ ಜೊತೆಗೆ ಬಂಧನವಾಗಿರುವ ಎಲ್ಲರನ್ನೂ ಬಿಡುಗಡೆ ಮಾಡುವಂತೆ ವೇದಿಕೆ ಒತ್ತಾಯಿಸಿತು.
ಪ್ರತಿಭಟನೆಯಲ್ಲಿ ಡಾ.ಇಸಾಬೆಲ್ ಝೇವಿಯರ್, ಡಾ.ಸುಶಾಂತಿ ಪ್ರಸನ್ನಕುಮಾರ, ವಸಂತ ಅರ್ಕಾಚಾರಿ, ಅಂಜುಮನ ಮಹಾವಿದ್ಯಾಲಯದ ಪ್ರಾಂಶುಪಾಲ ಡ.ಮೀರಾ ನಾಯಕ, ಹೋಲಿ ಕ್ರಾಸ್ ದೇವಾಲಯದ ಸ್ವಾಮಿ ಶಾಂತಪ್ಪ, ಸಂತ ಜೋಸೇಪರ ಮಹಾವಿದ್ಯಾಲಯದ ಪ್ರಾಂಶುಪಾಲ ವಿಜಯ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.