ಭಾರತ ಬಂದ್: ಹುಬ್ಬಳ್ಳಿಯಲ್ಲಿ ಏನೂ ನಡೀತಿದೆ ನೋಡಿ.. ವೀಡಿಯೋ ಸಮೇತ ಮಾಹಿತಿ
1 min readಹುಬ್ಬಳ್ಳಿ: ಕೃಷಿ ಮಸೂದೆಯನ್ನ ಕೇಂದ್ರ ಸರಕಾರದ ಜಾರಿಗೆ ತಂದಿದ್ದು, ಅದು ರೈತ ವಿರೋಧಿಯಾಗಿದೆ ಎಂದು ಭಾರತ ಬಂದ್ ಕರೆಯಲಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ದೊರಕಿದ್ದು, ನಗರದ ವಿವಿಧೆಡೆ ಪ್ರತಿಭಟನೆ ಆರಂಭಗೊಂಡಿದೆ.
ಪ್ರತಿಭಟನೆಯ ದೃಶ್ಯಗಳು..
ಬೆಳಿಗ್ಗೆ ಹಳೇ ಬಸ್ ನಿಲ್ದಾಣ ಮತ್ತು ಚೆನ್ನಮ್ಮ ವೃತ್ತದಲ್ಲಿ ಆರಂಭಗೊಂಡ ಹೋರಾಟ, ನಂತರ ಹೊಸೂರು ವೃತ್ತ, ಸಾರಿಗೆ ಡೀಪೋ ಬಳಿ ಪ್ರತಿಭಟನೆ ನಡೆಯುತ್ತಿದೆ. ಹೊಸೂರು ವೃತ್ತದಲ್ಲಿ ರೈತ ಸಂಘದ ಸಿದ್ಧು ತೇಜಿ ಸೇರಿದಂತೆ ಹಲವರು ರಸ್ತೆ ಮಧ್ಯದಲ್ಲಿ ಕುಳಿತು, ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಸಾರಿಗೆ ಬಸ್ ಗಳು ಸಂಚಾರ ನಡೆಸದಂತೆ ಮನವಿ ಮಾಡಿಕೊಂಡರೂ ಬಂದ್ ಮಾಡದ ಹಿನ್ನೆಲೆಯಲ್ಲಿ ಬಸ್ ಹೊರಗೆ ಹೋಗದಂತೆ ಡೀಪೋದ ಮುಂದೆ ಪ್ರತಿಭಟನೆ ನಡೆಸಿದರು. ಸಂಚರಿಸುವ ಬಸ್ ಗಳ ಮುಂದೆ ಹೋರಾಟ ಮುಂದುವರೆದಿದೆ. ನಗರದ ಬಹುತೇಕ ಅಂಗಡಿಮುಗ್ಗಟ್ಟುಗಳು ಬಂದ್ ಆಗಿವೆ.