ನಾಳೆ ಪ್ರಲ್ಹಾದ ಜೋಶಿಯವರಿಂದ ನಾಮಪತ್ರ ಸಲ್ಲಿಕೆ- 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಆಗಮನದ ನಿರೀಕ್ಷೆ…!!!

ಧಾರವಾಡ: ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನಾಳೆ ತಮ್ಮ ಉಮೇದುವಾರಿಕೆಗಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಕ್ಷೇತ್ರದ ಬಹು ಭಾಗದಲ್ಲಿ ನಿರಂತರ ಪ್ರಚಾರ ಮಾಡಿರುವ ಜೋಶಿಯವರ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾವಣೆಯಾಗುವ ಸಾಧ್ಯತೆಯಿದೆ.
ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ಈ ಸಮಯದಲ್ಲಿ ಆಗಮಿಸುತ್ತಿದ್ದು, ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ. ಹೀಗಾಗಿ ಪ್ರತಿ ಕ್ಷೇತ್ರದಿಂದ ನೂರಾರೂ ವಾಹನಗಳು ಧಾರವಾಡಕ್ಕೆ ಆಗಮಿಸಲಿವೆ.
ಪ್ರಲ್ಹಾದ ಜೋಶಿಯವರು ಈಗಾಗಲೇ ನಾಲ್ಕು ಬಾರಿ ಬಹುಮತದಿಂದ ಆಯ್ಕೆಯಾಗುತ್ತ ಬಂದಿದ್ದು, ಈ ಬಾರಿಯೂ ಗೆಲುವು ಸಾಧಿಸಿದರೇ, ಈ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಕಾರ್ಯಕರ್ತರು ಇದಕ್ಕೆ ಕಂಕಣಬದ್ಧರಾಗಿದ್ದಾರೆ.