“ವೃದ್ಧ ಜೀವಿಯ” ಮನದಲ್ಲಿ “ಪೂಜ್ಯಭಾವ” ಮೂಡಿಸಿದ ಧಾರವಾಡ ನಗರ ಪೊಲೀಸರು…!!!
1 min readಧಾರವಾಡ: ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯನ್ನ ಕಳೆದುಕೊಂಡಿದ್ದ ವೃದ್ಧ ಕುಟುಂಬಕ್ಕೆ ಆಸರೆಯಾಗಿ ನಿಂತ ಧಾರವಾಡ ಶಹರ ಠಾಣೆ ಪೊಲೀಸರು, ಹೊಸದೊಂದು ಭಾಷ್ಯಯನ್ನ ಬರೆದಿದ್ದಾರೆ.
ಜೂನ್ 22ರಂದು ಧಾರವಾಡದ ಸುಭಾಸ ರಸ್ತೆಯಲ್ಲಿ ಹುಬ್ಬಳ್ಳಿಯ ವಯಸ್ಸಾದ ಸರ್ವಮಂಗಳ ಧನ್ಯಕುಮಾರ್ ಒಕ್ಕುಂದ ಎನ್ನುವವರು ಸುಮಾರು 70ಗ್ರಾಂ (5.50000 ರೂ.) ಚಿನ್ನದ ಆಭರಣಗಳ್ಳನ್ನು ತಮ್ಮ ಪರ್ಸನಲ್ಲಿ ಇಟ್ಟುಕೊಂಡು ಹೋಗುವಾಗ ಅದನ್ನು ಕಳೆದುಕೊಂಡಿದ್ದರು.
ಘಟನೆಯ ಬಗ್ಗೆ ಶಹರ ಪೊಲೀಸ್ ಠಾಣೆಗೆ ಬಂದ ವೃದ್ಧ ದಂಪತಿಗಳು ವಿಷಯ ತಿಳಿಸಿ, ಕಣ್ಷೀರಿಟ್ಟಿದ್ದರು. ತಕ್ಷಣವೇ ಪೊಲೀಸರು ಜಾಗೃತರಾಗಿ, ವೃದ್ಧರಿಗೆ ಅವರ ವಸ್ತುವನ್ನ ಕೊಡಿಸಲೇಬೇಕು ಎಂದು ಪಣತೊಟ್ಟು ಹುಡುಕಾಟ ಆರಂಭಿಸಿದ್ದರು.
ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ N.C. ಕಾಡದೇವರಮಠ, PSI ಚಂದ್ರಶೇಖರ ಮದರಕಂಡಿ, ಕ್ರೈಂ ಸಿಬ್ಬಂದಿಗಳಾದ HC1573 M.B. ಗೆದ್ದಿಕೇರಿ, HC1421 D.V.ಘಾಳರೆಡ್ಡಿ, HC1609 G.G.ಚಿಕ್ಕಮಠ, HC1828 I.P.ಬುರ್ಜಿ. PC3104 ಪ್ರವೀಣ ತಿರ್ಲಾಪುರ ಸೇರಿ ಕಳೆದು ಹೋದ ವಸ್ತುವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವೃದ್ಧ ದಂಪತಿಗಳು ಕಳೆದು ಹೋದ ವಸ್ತುವನ್ನ ಪೊಲೀಸರು ಕೈಗೆ ಇಟ್ಟಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿ ವೃದ್ಧರಿಬ್ವರೂ ಹೊರಟಾಗ, ಪೊಲೀಸರಲ್ಲಿ ನೆಮ್ಮದಿಯ ಭಾವ ಮೂಡಿತ್ತು.