ದಕ್ಷ ಅಧಿಕಾರಿ ಮುರುಗೇಶ ಚೆನ್ನಣ್ಣನವರ ಇಂದಿನಿಂದ “ಹುಬ್ಬಳ್ಳಿ ಗ್ರಾಮೀಣ” ಪಿಐ….
1 min readಹುಬ್ಬಳ್ಳಿ: ಅವಳಿನಗರದ ದಕ್ಷ ಅಧಿಕಾರಿಯಾಗಿರುವ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದರು.
ಹುಬ್ಬಳ್ಳಿಯ ಹೆಸ್ಕಾಂನಲ್ಲಿದ್ದ ಮುರುಗೇಶ ಚೆನ್ನಣ್ಣನವರ ಅವರನ್ನ ಗದಗ ಡಿಎಸ್‌ಬಿ ವರ್ಗಾವಣೆಯಲ್ಲಿದ್ದಾಗಲೇ, ಸರಕಾರ ಅವರನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಿತು. ಈ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ್ದರು.
ಸೈಕಲಿಂಗ್‌ನಲ್ಲಿ ಪೊಲೀಸ್ ಇಲಾಖೆಯ ಗೌರವವನ್ನ ಇಮ್ಮಡಿಸಿರುವ ಮುರುಗೇಶ ಅವರು, ಅವಳಿನಗರದಲ್ಲಿ ನಡೆದ ಹಲವು ಪ್ರಮುಖ ಪ್ರಕರಣಗಳನ್ನ ಪತ್ತೆ ಹಚ್ಚಿದ್ದರು.
ಹುಬ್ಬಳ್ಳಿಯ ಗೋಕುಲ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ರಿವಾಲ್ವರ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಲ್ಲಪ್ಪನನ್ನ ಚೇಸಿಂಗ್ ಮಾಡಿ ಹಿಡಿದಿದ್ದರು. ನಕಲಿ ಚಿನ್ನ, ನಕಲಿ ನೋಟು, ಮದುವೆಯಾಗಿ ವಂಚನೆ ಮಾಡುತ್ತಿದ್ದ ತಂಡ ಸೇರಿದಂತೆ ಅವಳಿನಗರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು.
ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಹಲವು ಕಾನೂನು ಬಾಹಿರ ದಂಧೆಗಳು ಮನೆ ಮಾಡಿದ್ದು, ಅವುಗಳನ್ನ ಚೆನ್ನಣ್ಣನವರ ಮಟ್ಟ ಹಾಕುತ್ತಾರೆಂಬ ಭರವಸೆ ಜನರಲ್ಲಿದೆ.