ಹುಬ್ಬಳ್ಳಿ-ಧಾರವಾಡದ ಇತಿಹಾಸದಲ್ಲೇ ಒಂದೇ ಸಲ “45” ಕಿಡಗೇಡಿಗಳ ಗಡಿಪಾರು… ಚೇತನ, ರಾಹುಲ ಪ್ರಭು, ಅಡ್ಡ ಸೊಹೈಲ್….
ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮೀಷನರೇಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಬಾರಿಗೆ 45 ಜನ ಕ್ರಿಮಿನಲ್ ಹಿನ್ನೆಲೆ ಹೊಂದಿದವರನ್ನ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಧಾರವಾಡದ ಚೇತನ ಮೇಟಿ, ಅಡ್ಡ ಸೊಹೈಲ್, ಹುಬ್ಬಳ್ಳಿ ಹೊಸೂರಿನ ರಾಹುಲ ಪ್ರಭು ಸೇರಿದಂತೆ ನಲವತೈದು ಆರೋಪಿಗಳ ಹಿನ್ನೆಲೆ ಮೇರೆಗೆ ಆದೇಶವನ್ನ ಪೋಟೊ ಸಮೇತ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಗಡಿಪಾರು ಮಾಡಿರುವವರು ಕಂಡು ಬಂದರೇ, ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಕೋರಿರುವ ಪೊಲೀಸರು, ಸಾರ್ವಜನಿಕ ವಲಯದಲ್ಲಿ ಪದೇ ಪದೇ ತೊಂದರೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.