ಮಟಕಾ ಬುಕ್ಕಿಯಂದು ಬಡಿದು ಕಣ್ಣು ಕಳೆದರು- ಅಲ್ಲವೆಂದ ಮೇಲೆ ಕಾಂಪ್ರೂಮೈಸಗೆ ನಿಂತರು: ಯಾರೂ ಆ ‘161’ ಪೊಲೀಸರು..?

ಹುಬ್ಬಳ್ಳಿ: ನಗರದಲ್ಲಿ ಯಾವ ಯಾವ ಮೂಲೆಯಲ್ಲಿ ಎಂತೆತಹ ಪೊಲೀಸರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂಬುದು ಪ್ರತಿದಿನವೂ ಸೋಜಿಗ ಮೂಡಿಸುತ್ತಿದೆ. ಕೆಲವರು ತಮ್ಮ 161 ಗಾಗಿ ಏನೂ ಮಾಡಲು ಹಿಂಜರಿಯುತ್ತಿಲ್ಲ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದ್ದು, ಆ ಸಾಕ್ಷಿಯ ಜೊತೆಗೆ ಕಾಂಪ್ರೂಮೈಸ್ ಮಾಡಿಕೊಳ್ಳಲು ಪ್ರಮುಖ ಬುಕ್ಕಿಯೋರ್ವನನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ವಿಮಾನ ನಿಲ್ದಾಣದ ರಸ್ತೆಯಲ್ಲಿನ ಠಾಣೆಯೊಂದರಲ್ಲಿನ ಮೂವರು ಪೊಲೀಸರು, ರಾಜು (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕನ ಮನಗೆ ಬೆಳಿಗ್ಗೆ ಏಳು ಗಂಟೆಗೆ ಹೋಗಿ ಕರೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಆತನ ಕಣ್ಣೊಂದು ಕಾಣದ ಸ್ಥಿತಿಗೆ ಹೋಗಿದ್ದು, ಆತನ ಹಿಡಿಯುವ ಮುನ್ನ ಮಟಕಾ ಬುಕ್ಕಿಯಂದು ತಿಳಿದು ಹೀಗೆ ಮಾಡಲಾಗಿದೆ.
ರಾಜು ಎಂಬ ಯುವಕನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೊತ್ತಾಗುವ ಮುನ್ನವೇ ಮೂವರು ಪೊಲೀಸರು, ಕಣ್ಣು ಕಾಣದಂತೆ ಹೊಡೆದಿದ್ದು ಪ್ರಕರಣ ಬೆಳಕಿಗೆ ಬಾರದಂತೆ ತಡೆಯಲು ಸಿನೀಯರ್ ಬುಕ್ಕಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆನ್ನುವುದು ರಹಸ್ಯವಾಗಿ ಉಳಿದಿಲ್ಲ.
ಹೊಡೆತ ತಿಂದಿರುವ ರಾಜು ಇದೀಗ ನೋವಿನಿಂದ ಸಂಪೂರ್ಣ ಕಣ್ಣು ಕಳೆದುಕೊಳ್ಳುವ ಆತಂಕದಲ್ಲಿದ್ದು, ಹೊಡೆದ ಪೊಲೀಸರ ಬಗ್ಗೆ ಸಾರ್ವಜನಿಕವಾಗಿಯೇ ಹೇಳಿಕೆ ಕೊಡಲಿದ್ದಾರೆ.
ಈಗಾಗಲೇ ಆತನ ಕಣ್ಣೀಗೆ ಸ್ಥಳೀಯವಾಗಿ ಯಾವುದೇ ರೀತಿಯ ಚಿಕಿತ್ಸೆ ದೊರಕಿಲ್ಲ. ಅದರಲ್ಲಿಯೇ ಓರ್ವ ಮಹಾನುಭಾವ ಪೊಲೀಸ್ 2ಸಾವಿರ ರೂಪಾಯಿ ಕೊಟ್ಟು ಹೋಗಿ, ಔದಾರ್ಯ ಮೆರೆದಿದ್ದಾನಂತೆ. ಇಂತಹ ಪೊಲೀಸರೇ, ಅವಳಿನಗರದ ವ್ಯವಸ್ಥೆಯನ್ನ ಹಾಳು ಮಾಡುತ್ತಿರುವುದು. ಇಡೀ ಪ್ರಕರಣದ ಮಾಹಿತಿ ನೂತನ ಪೊಲೀಸ್ ಆಯುಕ್ತರಿಗೆ ತಲುಪಲಿದ್ದು, ಸಂಬಂಧಿಸಿದವರಿಗೆ ತಕ್ಕ ಪಾಠವನ್ನ ಹೊಸ ಆಯುಕ್ತರು ಮಾಡಲಿದ್ದಾರೆಂದು ಹೇಳಲಾಗಿದೆ.