ಅಂಚಟಗೇರಿ ನೀಲಗಿರಿ ತೋಪಿನಲ್ಲಿ ತಟ್ಟಾಟ- ಸಿಕ್ಕವರು ಯಾರು ಯಾರೂ ಗೊತ್ತಾ

ಹುಬ್ಬಳ್ಳಿ: ಅವಳಿನಗರದ ಅಕ್ರಮ ದಂಧೆಗಳ ವಿರುದ್ಧ ಸಮರ ಸಾರಿರುವ ಪೊಲೀಸರು ಮಾಹಿತಿ ಸಿಕ್ಕ ತಕ್ಷಣವೇ ದಾಳಿ ಮಾಡುತ್ತಿದ್ದಾರೆ. ಹೀಗಾಗಿ, ಬಹುತೇಕ ಕುಟುಂಬಗಳ ಬದುಕು ಒಳ್ಳೆಯ ಭರವಸೆ ಕಾಣುತ್ತಿದೆ. ಇಂತಹ ಭರವಸೆ ಮೂಡಿಸುವ ಕಾರ್ಯ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಂದ ನಡೆದಿದ್ದು, ಒಂಬತ್ತು ಜನರನ್ನ ಎಳೆದು ತಂದು ಕಾನೂನು ಪಾಠ ಕಲಿಸಿದ್ದಾರೆ.
ಹೌದು.. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ- ಚೆನ್ನಾಪುರ ರಸ್ತೆಯ ಮಧ್ಯದಲ್ಲಿ ಇರುವ ನೀಲಗಿರಿ ತೋಪಿನಲ್ಲಿ ಅಂದರ- ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, ಒಂಬತ್ತು ಜನರನ್ನ ಬಂಧನ ಮಾಡಿದ್ದಾರೆ.
ಬಂಧಿತರಿಂದ 60500 ರೂಪಾಯಿ ನಗದು, ಐದು ಬೈಕ್, ಹತ್ತು ಮೊಬೈಲ್ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆದಿದ್ದಾರೆ.
ಹಳೇಹುಬ್ಬಳ್ಳಿ ಹೆಗ್ಗೇರಿಯ ಬಸವರಾಜ ಗುಂಜಳ್ಳಿ, ಹೊಸಗಬ್ಬೂರಿನ ಮಂಜುನಾಥ ಹಿರೇಮಠ, ಬಾಶಲ್ ಮಿಶನ್ ಕಂಪೌಂಡ ನಿವಾಸಿ ಯೇಸುದಾಸ ವಳಗುಂದಿ, ಆನಂದನಗರ ನಿವಾಸಿ ಅರ್ಜುನ ಖಾಲಿಗಾಡಿ, ಈಶ್ವರನಗರದ ವಿಶಾಲ ಹನುಮಸಾಗರ, ನೇಕಾರನಗರದ ಕೃಷ್ಣಾ ಧಲಬಂಜನ ಹಾಗೂ ಚಂದನ ನಾಯಕ ಮತ್ತು ಸದಾಶಿವನಗರದ ನೀಲಪ್ಪ ಭಗವತಿ ಬಂಧಿತರಾಗಿದ್ದಾರೆ.
ಇನ್ಸಪೆಕ್ಟರ್ ರಮೇಶ ಗೋಕಾಕ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಎಲೆ ತಟ್ಟೋರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.