17K “ಫೋನ್ ಪೇ” ಹಾಕಿಸಿಕೊಂಡು ಲೋಕಾ ಬಲೆಗೆ ಬಿದ್ದ ಪಿಡಿಓ…!!!

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಪಿಡಿಓ
ಕವಲಗಾ ಬಿ ಪಂಚಾಯತಿ ಪಿಡಿಓ ಪ್ರೀತಿರಾಜ್ ಲೋಕಾ ಬಲೆಗೆ
ಕಲಬುರಗಿ: ತಾಲ್ಲೂಕಿನ ಕವಲಗಾ ಬಿ ಗ್ರಾಮ ಪಂಚಾಯತಿ ಪಿಡಿಓ ಅವರು 17 ಸಾವಿರ ಲಂಚ ಪೋನ್ ಪೇ ಮೂಲಕ ಪಡೆಯುವಾಗ ಲೋಕಾ ದಾಳಿಯಲ್ಲಿ ಸಿಲುಕಿದ್ದಾರೆ.
ವೀಡಿಯೋ…
ಕವಲಗಾ ಬಿ ಪಂಚಾಯತಿಯ ಪಂಪ್ ಆಪರೇಟರ್ ಬಳಿ ಲಂಚ ಪಡೆಯುವಾಗ ದಾಳಿ ನಡೆದಿದೆ. ಪಂಪ್ ಆಪರೇಟರ್ ಗುರುಸಿದ್ದಯ್ಯ ಸ್ಥಾವರಮಠ ಬಳಿ ಲಂಚ ಪಡೆಯುವಾಗ ದಾಳಿ ಆಗಿದೆ.
ಐದು ತಿಂಗಳ ವೇತನ ಪಾವತಿ ಸೇರಿ ಕರ್ತವ್ಯಕ್ಕೆ ಪುನಃ ನೇಮಕ ಮಾಡಿಕೊಳ್ಳಲು ಪಿಡಿಓ ಲಂಚಕ್ಕೆ ಬೇಡಿಕೆಯಿಟ್ಟ ಸಮಯದಲ್ಲಿ ಲೋಕಾಯುಕ್ತ ಇನ್ಸಪೆಕ್ಟರ್ ಅರುಣ್ ಮರುಗುಂಡಿ ತಂಡ ದಾಳಿ ನಡೆಸಿ, ವಶಕ್ಕೆ ಪಡೆದುಕೊಂಡಿದ್ದಾರೆ.