ಹುಬ್ಬಳ್ಳಿಯಲ್ಲಿ ಪೊಲೀಸ್ ರಾಬರಿ.. ಎನ್ನುವುದು ಮಾಹಿತಿ: ಆಗಿಲ್ಲ ಅಂತಾರೆ ಇನ್ಸಪೆಕ್ಟರ್..! ಹಾಗಾದ್ರೇ ನಿಜ್ಜಾ ಏನೂ..!
1 min readಹುಬ್ಬಳ್ಳಿ: ಕಳೆದ ರಾತ್ರಿ ಹುಬ್ಬಳ್ಳಿಯ ಪೊಲೀಸ್ ಠಾಣೆಯೊಂದರ ವ್ಯಾಪ್ತಿಯಲ್ಲಿ ಪೊಲೀಸನನ್ನೇ ಎಳೆದಾಡಿ ಹಣವನ್ನ ದೋಚಿಕೊಂಡು ಹೋದ ಘಟನೆ ನಡೆದಿದೆ ಎನ್ನಲಾಗಿದ್ದು, ಆರಕ್ಷಕರಿಗೂ ರಕ್ಷಣೆಯಿಲ್ಲವೇ ಎನ್ನುವಂತಾಗಿದೆ.
ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಾಹನ ಚಾಲಕ ಸಿಆರ್ ಪೇದೆಯನ್ನ ದೋಚಿ, ಪರಾರಿಯಾಗಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ರಾತ್ರಿ ಆ ಪ್ರದೇಶದಲ್ಲಿ ಹೋಗುತ್ತಿದ್ದಾಗ, ಕೆಲವರು ಬಂದು 20ರಿಂದ 25 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆಂದು ಹೇಳಲಾಗಿದೆ.
ಆದರೆ, ರಾತ್ರಿ ಒಂದೂವರೆ ಮೇಲೆ ಇನ್ಸಪೆಕ್ಟರ್ ಚಾಲಕ ಒಬ್ಬರೇ ‘ಆ’ ಪ್ರದೇಶಕ್ಕೆ ಯಾಕೆ ಹೋದರು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಆ ಠಾಣೆಯ ಇನ್ಸಪೆಕ್ಟರರನ್ನ ಮಾತಾಡಿಸಿದಾಗ ‘ನಿಮಗೆ ಯಾರೂ ಹೇಳಿದ್ರು. ಹಂಗೇನ್ ನಡೆದಿಲ್ಲ’ ಅಂದ್ರು. ಆದರೆ, ಯಾವ ಪೇದೆಯ ಮೇಲೆ ಹಲ್ಲೆ ಆಗಿ ಹಣವನ್ನ ದೋಚಲಾಗಿದೆಯೋ ಆ ಪೇದೆಯ ಮೊಬೈಲ್ ಕೂಡಾ ಸ್ವೀಚ್ ಆಫ್ ಆಗಿದೆ.
ಆದರೂ, ಹೀಗೆ ಆಗಬಾರದಿತ್ತು ಅಲ್ವಾ..!