ಸಂಸತ್ ಭವನದಲ್ಲಿ “ಸ್ಮೋಕ ದಾಳಿ” ನಿವೃತ್ತ ಡಿವೈಎಸ್ಪಿಯ ಪುತ್ರ, ದೆಹಲಿ ಪೊಲೀಸರ ವಶಕ್ಕೆ…

ನವದೆಹಲಿಯಲ್ಲಿ ಸ್ಮೋಕ ದಾಳಿ ಪ್ರಕರಣ
ಮನೋರಂಜನ್ ಜೊತೆ ಸಂಪರ್ಕ
ಬಾಗಲಕೋಟೆ: ಮೈಸೂರಿನ ಮನೋರಂಜನ್ ಸಂಸತ್‌ನಲ್ಲಿ ಕಲರ್ ಸ್ಮೋಕ ದಾಳಿಗೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ಪಿ ಪುತ್ರನನ್ನ ದೆಹಲಿ ಪೊಲೀಸರು ಕೆಲವೊತ್ತು ವಿಚಾರಣೆ ನಡೆಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆಯ ನವನಗರದಲ್ಲಿರುವ ಸಾಯಿಕೃಷ್ಣ ಜಗಲಿ ಎಂಬ ಯುವಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಸಂಸತ್‌ನಲ್ಲಿ ಆತಂಕ ಸೃಷ್ಟಿಸಿದ್ದ ಮನೋರಂಜನ್ ಸಂಪರ್ಕದಲ್ಲಿದ್ದನೆಂದು ಹೇಳಲಾಗಿದೆ.
ವಶಕ್ಕೆ ಪಡೆದ ವೀಡಿಯೋ…
ಈ ಬಗ್ಗೆ ಸಾಯಿಕೃಷ್ಣ ಜಗಲಿ ಸಹೋದರಿ ಸ್ಪಂದನ ಪ್ರತಿಕ್ರಿಯೆ ನೀಡಿದ್ದು, ತಮ್ಮ ಸಹೋದರನದ್ದು ಏನೂ ತಪ್ಪಿಲ್ಲವೆಂದಿದ್ದಾರೆ.