‘ಒಳಹರಿವು’ಗೆ ನರಸಮ್ಮ ಕೃಷ್ಣಮೂರ್ತಿ ಕಥಾ ಪ್ರಶಸ್ತಿ: ಭಾವ ಸಂಗಮ ಸಾಂಸ್ಕೃತಿಕ ವೇದಿಕೆ
1 min readಹುಬ್ಬಳ್ಳಿ: ಭಾವ ಸಂಗಮ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ನರಸಮ್ಮ ಕೃಷ್ಣಮೂರ್ತಿ ರಾಜ್ಯ ಮಟ್ಟದ ಕಥಾ ಸಾಹಿತ್ಯ ಪ್ರಶಸ್ತಿಯನ್ನು ಪ್ರಸಕ್ತ ಸಾಲಿಗೆ(2020) ಯುವ ಕಥೆಗಾರ ಸಂತೋಷಕುಮಾರ ಮೆಹಂದಳೆ ( ಕೈಗಾ) ಅವರ “ಒಳ ಹರಿವು” ಕಥೆ ಪಡೆದುಕೊಂಡಿದೆ.
ಪ್ರಶಸ್ತಿಯು ಮೂರು ಸಾವಿರ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಭಾವಸಂಗಮ ಸನ್ಮಾನವನ್ನು ಒಳಗೊಂಡಿರುತ್ತದೆ. 2021 ರಲ್ಲಿ ನಡೆಯುವ ಭಾವಸಂಗಮ 6 ನೆಯ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಸ್ಪರ್ಧೆಯಲ್ಲಿ ಡಾ.ಕೊಳ್ಚಪ್ಪೆ ಗೋವಿಂದಭಟ್ ( ಕಾಸರಗೋಡು), ಅವರ ಜೊಕಾಲಿ ಕಥೆ ಎರಡನೇಯ ಸ್ಥಾನ ಮತ್ತು ಶ್ವೇತಾ ನರಗುಂದ ( ಬೆಳಗಾವಿ) ಅವರ ವಿಪ್ಲವ ಕಥೆ ಮೂರನೆಯ ಸ್ಥಾನ ಪಡೆದುಕೊಂಡಿವೆ.
ಕೊಡಗು ಜಿಲ್ಲೆ ಕಾಂತಬೈಲುವಿನ ಸಹನಾ ಕಾಂತಬೈಲು, ಸಿದ್ದಾಪುರದ ಗೀತಾ ಹೆಗಡೆ ಮತ್ತು ಗಂಗೊಳ್ಳಿಯ ನರೇಂದ್ರ ಗಂಗೊಳ್ಳಿಯವರ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ದ್ವಿತೀಯ ಮತ್ತು ತೃತೀಯ ಬಹುಮಾನಿತರಿಗೆ ಕ್ರಮವಾಗಿ ಎರಡು ಸಾವಿರ ಮತ್ತು ಒಂದು ಸಾವಿರ ರೂ ನಗದು ಬಹುಮಾನ, ಪ್ರಮಾಣಪತ್ರ, ಸ್ಮರಣಿಕೆ ಮತ್ತು ಭಾವ ಸಂಗಮ ಸನ್ಮಾನ ಒಳಗೊಂಡಿರುತ್ತದೆ.
ಮೆಚ್ಚುಗೆ ಪಡೆದ ಕಥೆಗಾರರು ಮತ್ತುವಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ 94 ಕಥೆಗಾರರಿಗೆ ಭಾವ ಸಂಗಮ ಸಮಾಗಮಕ್ಕೆ ವಿಶೇಷ ಆಮಂತ್ರಣ ನೀಡಲಾಗುತ್ತದೆ. ಪಾರದರ್ಶಕವಾಗಿ ತೀರ್ಪು ನೀಡಿದ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ಮತ್ತು ಪಾಲ್ಗೊಂಡ ಎಲ್ಲರೂ ಅಭಿನಂದನಾರ್ಹರು ಎಂದು ಪ್ರಶಸ್ತಿ ಸಮಿತಿ ಸಂಯೋಜಕ ಉಮಾತನಯರಾಜ್ ತಿಳಿಸಿದ್ದಾರೆ.