ನುಗ್ಗಿಕೇರಿಯಲ್ಲಿ ಯುವಕನ ಕೊಲೆ: ಖಾರದಪುಡಿ ಕಣ್ಣಿಗೆ ಹಾಕಿ ಮನೆ ಮುಂದೆ ಮರ್ಡರ್
ಧಾರವಾಡ: ಮನೆಯ ಹೊರಗಡೆ ಕುಳಿತ ಯುವಕನ ಕಣ್ಣೀಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳೊಂದಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ನಡೆದಿದೆ.
ನುಗ್ಗಿಕೇರಿಯ ಹನುಮಂತಗೌಡ ಪಾಟೀಲ ಕೊಲೆಯಾದ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಮನೆಯಲ್ಲಿದ್ದವನಿಗೆ ಕಣ್ಣಿಗೆ ಖಾರದಪುಡಿ ಎರಚಿ ಕಾಲು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಲಾಗಿದೆ. ಘಟನೆಯ ನಡೆಯುತ್ತಿದಂತೆ ಶ್ವಾನದಳದೊಂದಿಗೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದರು.