Posts Slider

Karnataka Voice

Latest Kannada News

ಏಕರೂಪ ಪಿಂಚಣಿ NPS ನೌಕರರ ಒತ್ತಾಯ- ಸಿಎಂಗೆ ಪತ್ರ ಬರೆದ ಶಾಸಕ ಕಳಕಪ್ಪ ಬಂಡಿ

1 min read
Spread the love

ಗದಗ: ನೂತನ ಪಿಂಚಣಿಯನ್ನ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನ ಜಾರಿಗೆ ತರಬೇಕೆಂದು ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿಯವರನ್ನ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘ ಮನವಿ ಮಾಡಿಕೊಂಡಿತು.

ಈ ಬಗ್ಗೆ ಇಂದು ಗಜೇಂದ್ರಗಡದಲ್ಲಿ ಭೇಟಿಯಾದ ನೌಕರರ ಮನವಿ ಸ್ವೀಕರಿಸಿದ ಶಾಸಕ ಕಳಕಪ್ಪ ಬಂಡಿ, ಸಿಎಂ ಯಡಿಯೂರಪ್ಪನವರಿಗೆ ಪತ್ರವನ್ನ ಬರೆದು ಏಕರೂಪ ಪಿಂಚಣಿಯನ್ನ ಜಾರಿಗೆ ತರಬೇಕೆಂದು ಕೇಳಿಕೊಂಡಿದ್ದಾರೆ.

ನಿವೃತ್ತ ನೌಕರರ ಜೀವನಕ್ಕೆ ಈ ಪಿಂಚಣಿ ಯೋಜನೆ ಮಾರಕವಾಗಿದ್ದು, ಇದನ್ನ ತಕ್ಷಣವೇ ನಿಲ್ಲಿಸಬೇಕು. ಈ ಯೋಜನೆಯು ಷೇರು ಮಾರುಕಟ್ಟೆಯನ್ನ ಅವಲಂಬನೆ ಹೊಂದಿರುವುದರಿಂದ ನೌಕರರು ಹಣವನ್ನ ಕಳೆದುಕೊಂಡಿದ್ದಾರೆಂದು ವಿವರವಾಗಿ ಶಾಸಕ ಕಳಕಪ್ಪ ಬಂಡಿ ಸಿಎಂರಿಗೆ ವಿವರಣೆ ನೀಡಿದ್ದಾರೆ.

ಅಧ್ಯಕ್ಷರು ತಾಲೂಕ  NPS ಘಟಕ  ರೋಣ ಶರಣು ಪೂಜಾರ, ರೋಣದ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಶ್ ರಾಜೂರ, ಗ್ರಾಮಲೆಕ್ಕಿಗ ಸಂಘದ ಜಿಲ್ಲಾಧ್ಯಕ್ಷ ಜಯಪ್ರಕಾಶ್ ಭಜಂತ್ರಿ, ಗಜೇಂದ್ರಗಡ ಹೆಸ್ಕಾಂ ಅಧ್ಯಕ್ಷ ಆರ್.ಬಿ ಮಾಂಡ್ರೆ, ನೌಕರರ ಸಂಘ ರಾಜ್ಯ ಪರಿಷತ್ ಸದಸ್ಯ ಡಿ.ಆರ್. ಮ್ಯಾಗೇರಿ, ಸಿದ್ದು ಪಾಡಾ, ಶಾಖಾಧಿಕಾರಿ ಹೀನಾ ಕೌಜಲಗಿ, ಶಾಖಾಧಿಕಾರಿ ಎಸ್ ಬಿ ಮಹಾಮನಿ, ರೂಪ.ಎಚ್. ಎಂ, ಫಮೀದ ಬಡೇಖಾನ್, ಅನ್ನಪೂರ್ಣ ಇಟಗಿ, ರಾಜ್ಯ ಪರಿಷತ್ ನೌಕರರ ಸಂಘದ   ಸದಸ್ಯ  ಶ್ರೀರಾಮಜಿ ರಡ್ಡೇರ, ಸಂಗಮೇಶ್ ಕಡಗದ, ಶಬ್ಬೀರ್ ನಿಶಾನ್ದಾರ, ಪ್ರಭು ಹಾದಿಮನಿ, ಬಸವರಾಜ ದೇಸಾಯಿ ಗೌಡ್ರು, ಶರಣು ಗೌಡರ್, ಲೋಹಿತ್ ಮಸೂದೆ, ಮಾರುತಿ ವಕ್ಕಾರ್, ಮಲ್ಲಿಕಾರ್ಜುನ್ ಹುಲ್ಯಾಳ, ಉಮೇಶ್ ಅರಳಿಗಿಡದ, ಎಂ.ಆರ್ .ಹವಾಲ್ದಾರ್, ಸುಮಾ. M, ಲಲಿತಾ  ಉಂಡಂಗಡಿ, ಪ್ರತಿಭಾ. M, ಕಲ್ಲಯ್ಯ  ಗಳಾಪೂಜೆ ಮಠ, ಹನುಮೇಶ್ ಕೊಳ್ಳಿ, ಬಿ.ಎಸ್. ಹವಳಪ್ಪನವರ್, ಲಕ್ಷ್ಮಣ, ಸುಲೇಮಾನ್ ದಾದಾಬಾಯಿ, ರುದ್ರಮುನಿ, ಕಾಲೇಶ್ ವನ್ನಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *