ನವಲಗುಂದ ಪಟ್ಟಣದಲ್ಲಿ ಅಭಿವೃದ್ಧಿ: ಶಾಸಕರ ಅನುದಾನಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಂದ ಚಾಲನೆ

ನವಲಗುಂದ: ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸ್ಲಮ್ ಬೋರ್ಡ್ ವತಿಯಿಂದ ಪಟ್ಟಣಕ್ಕೆ 50 ಲಕ್ಷ ರೂಪಾಯಿಗಳ ಅನುದಾನವನ್ನ ತಂದಿದ್ದಾರೆ. ಈ ಅನುದಾನದ ಪೈಕಿ ವಾರ್ಡ ಒಂದರಲ್ಲಿ 7 ಲಕ್ಷದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಶಾಸಕರ ಅನುಪಸ್ಥಿತಿಯಲ್ಲಿ ನೂತನ ಅಧ್ಯಕ್ಷ ಮಂಜುನಾಥ ಜಾಧವ ಉಪಾಧ್ಯಕ್ಷೆ ಕೆ.ಎಚ್. ನಾಶಿಪುಡಿ ನೆರವೇರಿಸಿದರು. ಪಟ್ಟಣದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೂಡಿಕೊಂಡು ಹೋಗಬೇಕಾದ ಮನಸ್ಥಿತಿಯನ್ನ ಹೊಂದಬೇಕಾಗಿದೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು.
ನವಲಗುಂದ ಮಂಡಲದ ಬಿಜೆಪಿ ಅಧ್ಯಕ್ಷ S.B ದಾನಪ್ಪಗೌಡ್ರ, ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ಪುರಸಭೆ ಸದಸ್ಯೆ ಜ್ಯೋತಿ ಗೊಲ್ಲರ, ವಿಜಾಯ ಕಲಾಲ, ಮುದಕವ್ವ ಬೆಂಡಿಗೇರಿ, ಶರಣಪ್ಪ ಹಕ್ಕರಕಿ, ಬಸವರಾಜ ಕಟ್ಟಿಮನಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.