ರಾತ್ರೋರಾತ್ರಿ ರಾತ್ರಿ ನವಲಗುಂದ ಪೊಲೀಸರೇನು ಮಾಡಿದ್ರು: ಶಾಸಕ ಕೊಟ್ಟ ಎಚ್ಚರಿಕೆಯೇನು..?
1 min readನವಲಗುಂದ: ಪ್ರತಿಯೊಬ್ಬ ರೈತರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸೂಚನೆ ಕೊಟ್ಟಿದ್ದರಿಂದ ಪೊಲೀಸರು ತಾವೇ ಮುಂದೆ ನಿಂತು ಏನು ಮಾಡಿದ್ರು ಎಂಬುದನ್ನ ಪೂರ್ಣವಾಗಿ ಓದಿ ತಿಳಿಯಿರಿ.
ನವಲಗುಂದ ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಉಲ್ಬಣಿಸದಂತೆ ಕ್ರಮವನ್ನ ತೆಗೆದುಕೊಳ್ಳಲಾಗಿದೆ. ಪ್ರತಿಯೊಂದು ರೈತರಿಗೆ ಗೊಬ್ಬರ ಸಿಗಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯ ಆಗಬಾರದೆಂದು ಶಾಸಕರು ಇಲಾಖೆಯವರಿಗೆ ಸೂಚನೆ ನೀಡಿದ್ದರು.
ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸೈ ಜಯಪಾಲ ಪಾಟೀಲ, ಪಿಎಸೈ ಲಾಲಸಾಬ ಜೂಲಕಟ್ಟಿ ಸೇರಿದಂತೆ ಬಹುತೇಕರು ಉಪಸ್ಥಿತರಿದ್ದು, ರೈತರಿಗೆ ಸರಿಯಾದ ಕ್ರಮದಲ್ಲಿ ಗೊಬ್ಬರವನ್ನ ವಿತರಣೆ ಮಾಡಿದ್ರು.
ಪ್ರತಿಯೊಂದು ರೈತರಿಗೆ ಮೊದಲು ಕೂಪನ್ ಕೊಟ್ಟು, ಅದೇ ನಂಬರಿನ ಮುಖಾಂತರ ಒಬ್ಬೋಬ್ಬರನ್ನ ಕರೆದು ಗೊಬ್ಬರ ವಿತರಣೆ ಮಾಡಿದ್ದರಿಂದ ಯಾವುದೇ ತೊಂದರೆಯಾಗಿಲ್ಲ.
ಶಾಸಕರ ಕಟ್ಟುನಿಟ್ಟಿನ ಸೂಚನೆಯಿಂದ ಪ್ರತಿಯೊಬ್ಬರಿಗೂ ಗೊಬ್ಬರ ದೊರಕಿದ್ದು, ಇಲಾಖೆಯು ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ.