Posts Slider

Karnataka Voice

Latest Kannada News

ನವಲಗುಂದದಲ್ಲಿ ದಾಸ ಶ್ರೇಷ್ಠ ಸಂತ ಕನಕದಾಸ ಜಯಂತಿ

1 min read
Spread the love

ಧಾರವಾಡ: 15-16ನೇ ಶತಮಾನದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ ಕನಕದಾಸರ ಜಯಂತಿಯನ್ನ ನವಲಗುಂದ ತಾಲೂಕ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕ ಪ್ರದೇಶ ಕುರಬರ ಸಂಘದ ಆಶ್ರಯದಲ್ಲಿ ಸಂತ ಕನಕದಾಸ ಜಯಂತಿಯನ್ನ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನ ತಹಶೀಲ್ದಾರ ನವೀನ ಹುಲ್ಲೂರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಜನಸಿದರು. 15-16ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೇ ಕನಕದಾಸರು ಎಂದರೇ ತಪ್ಪಾಗಲಿಕ್ಕಿಲ್ಲ ಎಂದರು.

ತಾಲೂಕು ಪಂಚಾಯತಿ ಇಓ ಕಾಂಬಳೆ, PSI ಜಯಪಾಲ ಪಾಟೀಲ, ಕುರುಬ ಸಮಾಜದ ಅಧ್ಯಕ್ಷ  ಶರಣಪ್ಪ ಪವಾಡಿ, ಕುರುಬ ಸಮಾಜದ ಮಾಜಿ ಅಧ್ಯಕ್ಷ ಹನಮಂತಪ್ಪ ಇಬ್ರಾಹಿಂಪುರ, ಹನಮಂತಪ್ಪ ಗಾಡದ, ಸುಲೆಮಾನ್ ನಾಶೀಪುಡಿ, ಪುರಸಭೆ ಸದಸ್ಯ ಶಿವಾನಂದ ತಡಸಿ, ಹನಮಂತಪ್ಪ ಚಿಕ್ಕಣ್ಣವರ,  ಸಿದ್ದು ಬಸಾಪುರ, ಮಲ್ಲು ಮುಪ್ಪಯ್ಯನವರ, ವಿನಾಯಕ ತಿರಕೋಡಿ, ಪ್ರವೀಣ ಮುಗಣ್ಣವರ, ವಿಕ್ರಮ ಕುರಿ, ಪ್ರೇಮಾ ನಾಯ್ಕರ ಸೇರಿದಂತೆ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *