ನವಲಗುಂದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಕ್ಕಾಗಿ DSS ಆಗ್ರಹ
1 min readಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ತಹಶೀಲ್ದಾರ ಹಾಗೂ ಪುರಸಭೆಗೆ ಮನವಿವನ್ನ ನೀಡಲಾಯಿತು.
ಹೊಸ ಬಸ್ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನ ಒದಗಿಸಿಲ್ಲ. ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿಯು ಹೆಚ್ಚಾಗಿದ್ದು, ಪುಂಡ ಪೋಕರಿಗಳ ದಾಂಧಲೆಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಬಗ್ಗೆಯೂ ಗಮನ ನೀಡುತ್ತಿಲ್ಲ. ನೀರಿನ ವ್ಯವಸ್ಥೆಯನ್ನೂ ಸರಿಯಾಗಿ ಮಾಡುತ್ತಿಲ್ಲವೆಂದು ಹೇಳಿರುವ ಸಮಿತಿಯವರು, ವಾರದೊಳಗೆ ಸರಿ ಮಾಡದೇ ಇದ್ದರೇ ಹೋರಾಟವನ್ನ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮತಿಯ ನವಲಗುಂದ ಸಂಚಾಲಕ ನಿಂಗಪ್ಪ ಕೆಳಗೇರಿ, ರಮೇಶ ಮಾದರ, ರವಿ ಹುಣಸಿಮರದ, ಉಡಚಪ್ಪ ಮಾದರ, ರವಿ ಮಾದರ, ಪ್ರಭು ಮಾದರ, ಷಣ್ಮುಕ ಪೂಜಾರ, ರಾಮಪ್ಪ ಮಾದರ, ಅಶೋಕ ಮಾದರ, ಪರಶುರಾಮ ಹನಸಿ, ಶಾನಪ್ಪ ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.