ನರಿ ಬಾಯಿಗೆ ಸ್ಪೋಟಕವಿಟ್ಟು ಕೊಲೆ: ಪೊಲೀಸ್ ತನಿಖೆ ಆರಂಭ
ಹಾವೇರಿ: ಅನುಮಾಸ್ಪದ ಸ್ಫೋಟಕ ವಸ್ತು ಸ್ಪೋಟಗೊಂಡು ವನ್ಯ ಜೀವಿಯಾದ ನರಿಯನ್ನ ಕೊಂದ ಘಟನೆ ಹಾವೇರಿ ಜಿಲ್ಲೆಯ ಹಂಸಭಾವಿ ಪಟ್ಟಣದ ಪುರ ಗ್ರಾಮದಲ್ಲಿ ಸಂಭವಿಸಿದೆ.
ಅಡಿಕೆ ತೋಟದಲ್ಲಿ ಸ್ಪೋಟಕ ವಸ್ತುವನ್ನ ಬಾಯಲ್ಲಿ ಕಚ್ಚಿದ ಹಿನ್ನೆಲೆ ವನ್ಯ ಜೀವಿ ಸಾವಿಗೀಡಾಗಿದೆ. ಸ್ಪೋಟದಿಂದ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಸ್ಥಳದಲ್ಲೇ ನರಿ ಸತ್ತಿದೆ. ಹನುಮಂತಪ್ಪ ಎಂಬ ರೈತರ ತೋಟದಲ್ಲಿದ್ದ ಸ್ಪೋಟಕ ವಸ್ತುವಿನಿಂದ ಘಟನೆ ನಡೆದಿದ್ದು, ಸ್ಪೋಟಕ ವಸ್ತು ಯಾವುದು, ಮತ್ತು ಉದ್ದೇಶವನ್ನ ತಿಳಿಯಲು ಹಂಸಭಾವಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.