ಮುನ್ನೆಚ್ಚರಿಕೆ ವಹಿಸಿಕೊಂಡು ಜೀವ ಉಳಿಸಿಕೊಳ್ಳಿ- ಮೈಸೂರು ಮಹಾರಾಜ್ ಯದುವೀರ ಮನವಿ
ಮೈಸೂರು: ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಅನಗತ್ಯ ಓಡಾವುದನ್ನ ತಪ್ಪಿಸಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಮೈಸೂರು ಮಹಾರಾಜ ಯದುವೀರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಾಕ್ ಸಡಿಲಿಕೆ ನಂತರ ಲಾಕ್ ಡೌನ್ ಸಮಯದಲ್ಲಿ ಶುರು ಮಾಡಿರುವ ಸುರಕ್ಷತಾ ಕ್ರಮಗಳನ್ನ ಅನುಸರಿಸಿ ಎಲ್ಲರ ಹಿತ ಕಾಪಾಡಿ. ರಾಜ್ಯದ ಅನೇಕ ಸಂಘ ಸಂಸ್ಥೆಗಳು ಕೊರೋನಾ ವಿರುದ್ದ ಜಯಗಳಿಸಲು ಎಷ್ಟೋ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳನ್ನ ತಿಳಿಸಿದ್ದಾರೆ.
ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಅಭಿವೃದ್ಧಿ ಹಾಗೂ ಆರೋಗ್ಯವನ್ನು ದಯಪಾಲಿಸಲಿ. ಈ ಸಮಯದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿರುವ ಮೈಸೂರು ಯುವರಾಜ ಯಧುವೀರ್ ಸಂದೇಶದ ವೀಡಿಯೋ ವೈರಲ್ ಆಗಿದೆ.