ಖಾಸಗಿ ಆಸ್ಪತ್ರೆಗೆ ಖಡಕ್ ವಾರ್ನಿಂಗ್ ನೀಡಿದ ಜಿಲ್ಲಾಧಿಕಾರಿ: ತಪ್ಪಿದ್ರೇ ಪಕ್ಕಾ ಬಂದ್

ಮೈಸೂರು: ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, Sari, ILI ಹಾಗೂ ಕೊರೋನೊ ಲಕ್ಷಣಗಳ ರೋಗಿಗಳ ದೈನಂದಿನ ವರದಿ ನೀಡದ ವೈದಕೀಯ ಸಂಸ್ಥೆಗಳಿಗೆ ಕಠಿಣ ಕ್ರಮಕ್ಕೆ ಮುಂದಾಗಲಾವುದೆಂದು ಹೇಳಿದ್ದಾರೆ.
ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ ಕೆಲ ವೈದ್ಯರು, ಆಸ್ಪತ್ರೆಗಳು ವೆಬ್ ಸೈಟ್ ನಲ್ಲಿ ಅಪ್ಡೇಟ್ ಮಾಡುತ್ತಿಲ್ಲ. ಈ ಕ್ಷಣದಿಂದಲೆ SARI, ILI ಹಾಗೂ ಕೊವೀಡ್ ಲಕ್ಷಣಗಳಿರುವ ರೋಗಿಗಳ ವಿವರ ಅಪ್ಡೇಟ್ ಮಾಡಬೇಕು. ಇಲ್ಲವಾದಲ್ಲಿ ಕ್ಲಿನಿಕ್ ಹಾಗು ಖಾಸಗಿ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಎಲ್ಲಾ SARI, ILI ರೋಗಿಗಳ ಸ್ವಾಬ್ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ಎಚ್ಚರಿಕೆ ಸಂದೇಶವನ್ನ ಜಿಲ್ಲಾಧಿಕಾರಿ ಆಭಿರಾಮ್ ಜಿ ಶಂಕರ್ ನೀಡಿದ್ದಾರೆ.